Kannadaprabha The New Indian Express
ಮೊಣಕಾಲಲ್ಲಿ ರಕ್ತ ಸೋರುತ್ತಿದ್ದರೂ ಬ್ಯಾಟ್ ಬೀಸಿದ ವಾಟ್ಸನ್, ಇಷ್ಟಕ್ಕೂ ಹರ್ಭಜನ್ ಹೇಳಿದ್ದೇನು? 
By select 
14 May 2019 12:00:00 AM IST

ಹೈದರಾಬಾದ್: ಕಳೆದ ಭಾನುವಾರ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಚೆನ್ನೈ ತಂಡದ ಬ್ಯಾಟ್ಸಮನ್ ಶೇನ್ ವಾಟ್ಸನ್ ಮೊಣಕಾಲಲ್ಲಿ ರಕ್ತ ಸೋರುತ್ತಿದ್ದರೂ ಬ್ಯಾಟ್ ಬೀಸಿ ತಂಡಕ್ಕೆ ನೆರವಾಗಿದ್ದರು ಎಂಬ ಆಘಾತಕಾರಿ ಮಾಹಿತಿ ಇದೀಗ ಬಹಿರಂಗವಾಗಿದೆ.

ಭಾನುವಾರ ನಡೆದ ಫೈನಲ್ ಪಂದ್ಯದ ವೇಳೆ ಶೇನ್ ವಾಟ್ಸನ್ ಬ್ಯಾಟಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಅವರ ಮೋಣಕಾಲಿನ ಭಾಗ ಕೆಂಪಾಗಿತ್ತು. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿತ್ತು. ಆದರೆ ಕೆಲ ಮಂದಿ ಇದನ್ನು ನಕಲಿ ಫೋಟೋ ಎಂದು ಜರಿದಿದ್ದರು. ಆದರೆ ಇದೇ ವಿಚಾರವಾಗಿ ಸ್ವತಃ ಸಿಎಸ್ ಕೆ ತಂಡದ ಮತ್ತೋರ್ವ ಆಟಗಾರ ಹರ್ಭಜನ್ ಸಿಂಗ್ ಸ್ಪಷ್ಟನೆ ನೀಡಿದ್ದು, ಅದು ನಕಲಿ ಫೋಟೋ ಅಲ್ಲ ಅಸಲಿ ಫೋಟ.. ಅಲ್ಲಿರುುದು ನಿಜವಾದ ರಕ್ತ ಎಂದು ಹೇಳಿದ್ದಾರೆ.

ಈ ಬಗ್ಗೆ ತಮ್ಮ ಇನ್ ಸ್ಚಾಗ್ರಾಮ್ ನಲ್ಲಿ ಬರೆದುಕೊಂಡಿರುವ ಭಜ್ಜಿ, 'ವಾಟ್ಸನ್​ ಮೊಣಕಾಲಿನಲ್ಲಿ ರಕ್ತ ಬರುತ್ತಿರುವುದು ಕಾಣುತ್ತಿದೆಯಾ? ಆಟ ಮುಗಿದ ನಂತರ 6 ಸ್ಟಿಚ್ ​ಗಳನ್ನು ಹಾಕಲಾಗಿದೆ. ಡೈವ್​ ಮಾಡುವಾಗ ಪೆಟ್ಟಾಗಿದೆ. ಆದರೆ, ಈ ಬಗ್ಗೆ ಯಾರಿಗೂ ಹೇಳದೇ ಅವರು ಆಟವಾಡಿದ್ದಾರೆ. ಪಂದ್ಯವನ್ನು ಗೆಲುವಿನ ಸಮೀಪ ಕರೆ ತಂದಿದ್ದರು.. ಎಂದು ಅವರು ಬರೆದುಕೊಂಡಿದ್ದಾರೆ. ಈ ಮೂಲಕ ಈ ಕುರಿತ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. 

ಇನ್ನು ಭಾನುವಾರ ನಡೆದ ಐಪಿಎಲ್​ ಫೈನಲ್​ ಪಂದ್ಯದಲ್ಲಿ ರೋಹಿತ್​ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಕೇವಲ 1 ರನ್ ಗಳ ಅಂತರದಲ್ಲಿ ರೋಚಕವಾಗಿ​​ ಗೆದ್ದು ಬೀಗಿತ್ತು. ಗೆಲುವಿನ ಸಮೀಪದಲ್ಲಿದ್ದ ಎಂಎಸ್​​ ಧೋನಿ ನಾಯಕತ್ವದ ಚೆನ್ನೈ ಸೂಪರ್​ ಕಿಂಗ್ಸ್​​ ಕೊನೆಯ ಓವರ್​ ನಲ್ಲಿ ಎಡವಿತ್ತು.

Copyright � 2012 Kannadaprabha.com