Kannadaprabha The New Indian Express
ಕೇದಾರನಾಥ ಗುಹೆಯಲ್ಲಿ ಧ್ಯಾನ: ಮೋದಿ ಕಾಲೆಳೆದ ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ! 
By select 
20 May 2019 12:00:00 AM IST

ಮೋದಿ ಕೇದಾರನಾಥ ಗುಹೆಯಲ್ಲಿ ಮೋದಿ 17 ಗಂಟೆಗಳ ಕಾಲ ಧ್ಯಾನ ಮಗ್ನರಾಗಿದ್ದ ಸುದ್ದಿ, ಫೋಟೋ ಎಲ್ಲವೂ ವೈರಲ್ ಆಗಿ, ಚರ್ಚೆ ನಡೆಯುತ್ತಿದೆ. 

ಈ ನಡುವೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ಮೋದಿ ಬಗ್ಗೆ ಲಘು ಹಾಸ್ಯ ಮಾಡಿದ್ದು, ಟ್ವೀಟ್ ಮಾಡಿದ್ದಾರೆ. 

ಕೆಲವು ದಿನಗಳಿಂದ ಹಲವು ಧಾರ್ಮಿಕ ಫೋಟೋಗಳನ್ನು ನೋಡಿ, ನಾನೂ ಈಗ ಸರಣಿ ಕಾರ್ಯಗಾರಗಳನ್ನು ಪ್ರಾರಂಭಿಸುತ್ತಿದ್ದೇನೆ, ಧ್ಯಾನ ಫೋಟೋಗ್ರಫಿ, ಪೋಸ್ ಹಾಗೂ ಭಂಗಿಗಳ ಬಗ್ಗೆ ಕಾರ್ಯಾಗಾರ ನಡೆಯಲಿದೆ.  ವಿವಾಹ ಸಮಾರಂಭದ ಫೋಟೋಗ್ರಫಿ ನಂತರ ಧ್ಯಾನ ಫೋಟೋಗ್ರಫಿ, ಪೋಸ್ ಹಾಗೂ ಭಂಗಿಗಳ ಫೋಟೋಗ್ರಫಿ ಹೆಚ್ಚಿನ ಬೇಡಿಕೆ ಹೊಂದಿರುವುದಾಗಿದೆ ಎಂದು ಪ್ರಧಾನಿ ಕಾಲೆಳೆದಿದ್ದಾರೆ.

Copyright � 2012 Kannadaprabha.com