Kannadaprabha The New Indian Express
ಯೂಟ್ಯೂಬ್ ಗೆ ಅಪ್ಪಳಿಸಿದ ನಟ ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರದ ಟೀಸರ್ 
By select 
20 May 2019 12:00:00 AM IST

ಬೆಂಗಳೂರು: ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅಭಿನಯದ ಬಹು ನಿರೀಕ್ಷಿತ ಕುರುಕ್ಷೇತ್ರ ಚಿತ್ರದ ಅಧಿಕೃತ ಟೀಸರ್ ಬಿಡುಗಡೆಯಾಗಿದ್ದು, ಯೂಟ್ಯೂಬ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ.

ಯೂಟ್ಯೂಬ್ ನಲ್ಲಿ ಇಂದು ಸಂಜೆ 6 ಗಂಟೆಗೆ ಕುರುಕ್ಷೇತ್ರ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಟೀಸರ್ ಬಿಡುಗಡೆಯಾದ ಕೇವಲ 2 ಗಂಟೆಯಲ್ಲೇ ಬರೊಬ್ಬರಿ 132,540 ವೀಕ್ಷಣೆ ಕಂಡಿದೆ. ಕುರುಕ್ಷೇತ್ರ ನಟ ದರ್ಶನ್ ತೂಗುದೀಪ ಅವರ 50ನೇ ಚಿತ್ರ ಎಂಬ ಕಾರಣದಿಂದಾಗಿಯೂ ಮತ್ತು ಐತಿಹಾಸಿಕ ಕಥೆಯನ್ನಾಧರಿಸಿದ ಚಿತ್ರ ಎಂಬ ಕಾರಣಕ್ಕಾಗಿ ಈ ಚಿತ್ರ ಭಾರಿ ಸದ್ದು ಮಾಡುತ್ತಿದೆ. ಇಷ್ಟು ಮಾತ್ರವಲ್ಲದೇ ನಟ ಅಂಬರೀಷ್, ಅರ್ಜುನ್ ಸರ್ಜಾ, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಭಾರತೀಯ ಚಿತ್ರರಂಗದ ಘಟಾನುಘಟಿ ನಟರು ಈ ಚಿತ್ರದಲ್ಲಿ ಅಭಿನಯಿಸಿದ್ದು, ಇದೂ ಕೂಡ ಚಿತ್ರದ ಮತ್ತೊಂದು ಪ್ರಮುಖ ಅಂಶವಾಗಿದೆ.

ಕಳೆದ ಆಗಸ್ಟ್ ನಲ್ಲಿ ಬಿಡುಗಡೆಯಾಗಿದ್ದ ಚಿತ್ರದ ಟೀಸರ್ ಭಾರಿ ಸದ್ದು ಮಾಡಿತ್ತು. ಇದೀಗ ಮತ್ತೊಂದು ಟೀಸರ್ ಬಿಡುಗಡೆಯಾಗಿದ್ದು, ಚಿತ್ರದ ವೈಭವವನ್ನು ಟೀಸರ್ ನಲ್ಲಿ ರೂಪಿಸಲಾಗಿದೆ.

ಈ ಹಿಂದೆ ಚಿತ್ರದ ನಿರ್ಮಾಪಕ ಮುನಿರತ್ನ ಅವರು ಸುದ್ದಿಗೋಷ್ಠಿ ನಡೆಸಿ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದ್ದರು. ಬರುವ ವರಮಹಾ ಲಕ್ಷ್ನಿ ಹಬ್ಬದಂದು ಅಂದರೆ, ಆಗಸ್ಟ್ 9 ರಂದು ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಅದೇ ದಿನ ಖ್ಚಾತ ನಟ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಪೈಲ್ವಾನ್ ಕೂಡ ಬಿಡುಗಡೆಯಾಗುತ್ತಿರುವುದು ವಿಶೇಷ. ಬಹುಕೋಟಿ ಬಜೆಟ್ ಪೈಲ್ವಾನ್ ಚಿತ್ರ ಕನ್ನಡ, ತೆಲುಗು, ತಮಿಳು ಸೇರಿದಂತೆ ಒಟ್ಟು 7 ಭಾಷೆಗಳಲ್ಲಿ ತೆರೆಕಾಣುತ್ತಿದೆ. ಚಿತ್ರದನಲ್ಲಿ ನಟ ಸುದೀಪ್ ಕುಸ್ತಿ ಪಟುವಾಗಿ ಅಭಿನಯಿಸಿದ್ದಾರೆ. ಅಲ್ಲದೇ ಇದೇ ಮೊದಲ ಬಾರಿಗೆ ತಮ್ಮ ದೇಹವನ್ನು ಹುರಿಗೊಳಿಸಿ, ತಮ್ಮ ಕಟ್ಟು ಮಸ್ತಾದ ದೇಹವನ್ನು ಪ್ರದರ್ಶನ ಮಾಡಲಿದ್ದಾರೆ.

ಟೀಸರ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Copyright � 2012 Kannadaprabha.com