Kannadaprabha The New Indian Express
ಏಳು ವರ್ಷದ ನಂತರ ಬೆಳ್ಳಿತೆರೆಗೆ ಮರಳಿದ ಅಭಿನಯ 
By select 
22 May 2019 12:00:00 AM IST

ಬೆಂಗಳೂರು: ಸುಮಾರು ಏಳು ವರ್ಷಗಳಿಂಡ ಸ್ಯಾಂಡಲ್ ವುಡ್ ನಿಂದ ದೂರವಾಗಿದ್ದ ಹಿರಿಯ ನಟಿ ಅಭಿನಯ ಮತ್ತೆ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಹೊಸ ನಿರ್ದೇಶಕ ಅಭಿ ಇದೇ ಮೊದಲ ಬಾರಿಗೆ ನಿರ್ದೇಶನ ಕ್ಷೇತ್ರದಲ್ಲಿ ಛಾಪು ಮೂಡಿಸಲು ಮುಂದಾಗಿದ್ದಾರೆ. ನಿರ್ದೇಶಕರಾದ ಪ್ರದೀಪ್ ರಾಜ್ ಹಾಗೂ ಲೋಹಿತ್ ಸಂಪರ್ಕದಲ್ಲಿದ್ದ ಅಭಿ ಇದೀಗ ತಾವು ಸ್ವತಂತ್ರವಾಗಿ ಫೀಚರ್ ಫಿಲ್ಮ್ ಒಂದರ ತಯಾರಿ ನಡೆಸಿದ್ದಾರೆ. ಈ ಚಿತ್ರದ ಮೂಲಕ ಅಭಿನಯ ಮತ್ತೆ ಬಣ್ಣದ ಲೋಕಕ್ಕೆ ಮರಳುತ್ತಿದ್ದಾರೆ.

"ಕ್ರಶ್"ಎಂಬ ಹೆಸರಿನ ಈ ಚಿತ್ರದಲ್ಲಿ "ರಂಗ್ ಬಿ ರಂಗಿ" ಖ್ಯಾತಿಯ ಆರ್ಯ ಹಾಗೂ ಹೊಸ ಪ್ರತಿಭೆ ಪ್ರತಿಭಾ ಈ ಚಿತ್ರದ ಮುಖ್ಯ ತಾರಾಂಗಣದಲ್ಲಿದ್ದಾರೆ. ಅಭಿನಯ ಈ ಚಿತ್ರದಲ್ಲಿ ತಾಯಿಯ ಪಾತ್ರ ಮಾಡುತ್ತಿದ್ದು ಅವರಾಗಲೇ ಏಳು ದಿನಗಳ ಶೂಟಿಂಗ್ ಮುಗಿಸಿದ್ದಾರೆ.

"ಕ್ರಶ್" ಗೆ ವಿನೀತ್ ರಾಜ್ ಮೆನನ್ ಸಂಗೀತ ನೀಡಿದ್ದರೆ ಸತೀಶ್ ಛಾಯಾಗ್ರಹಣವಿದೆ. ಇದಾಗಲೇ ಶೇ. 50 ಭಾಗದ ಚಿತ್ರೀಕರಣ ಮುಗಿಸಿರುವ :ಕ್ರಶ್" ಚಿತ್ರತಂಡದ ಮುಂದಿನ ಹಂತದ ಶೂಟಿಂಗ್ ಮುಂಬರುವ ವಾರದಲ್ಲಿ ಮಂಗಳೂರಿನಲ್ಲಿ ನಡೆಯಲಿದೆ.

Copyright � 2012 Kannadaprabha.com