Kannadaprabha The New Indian Express
ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸೋಲಿನ ಕಹಿ: ರಾಹುಲ್ ಗಾಂಧಿ-ಪ್ರಿಯಾಂಕಾ ವಾದ್ರಾ ಭೇಟಿ 
By select 
23 May 2019 12:00:00 AM IST

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮುಖಭಂಗವಾಗಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ತನ್ನ ಸಹೋದರ ಮತ್ತು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಅವರ ಮನೆಯಲ್ಲಿ ಭೇಟಿಯಾದರು.

ರಾಜಕೀಯಕ್ಕೆ ಪ್ರಿಯಾಂಕಾ ಅವರ ಔಪಚಾರಿಕ ಪ್ರವೇಶ ಕೂಡ ಕಾಂಗ್ರೆಸ್ ಗೆ ಲಾಭದಾಯಕಾವಾಗಿ ಪರಿಣಮಿಸಲಿಲ್ಲ, ಪೂರ್ವ ಉತ್ತರ ಪ್ರದೇಶದಲ್ಲಿ ಪಖ್ಷದ ಉಸ್ತುವಾರಿ ಹೊತ್ತಿದ್ದ ಪ್ರಿಯಾಂಕಾ ಆ ಪ್ರದೇಶದಲ್ಲಿ ವ್ಯಾಪಕ ಪ್ರಚಾರ ನಡೆಸಿದರೂ ಪಕ್ಶ್ಗವು ಸಾಕಷ್ಟು ಸ್ಥಾನ ಗಳಿಸುವಲ್ಲಿ ವಿಫಲವಾಗಿದೆ.

ರಾಹುಲ್ ಗಾಂಧಿ ಅಮೇಠಿನಲ್ಲಿ ಕಠಿಣ ಸ್ಪರ್ಧೆ ಎದುರಿಸುತ್ತಿದ್ದಾರೆ. . ಬಿಜೆಪಿ ಪ್ರತಿಸ್ಪರ್ಧಿ ಸ್ಮೃತಿ ಇರಾನಿ ಅವರು 2,000 ಕ್ಕೂ ಅಧಿಕ ಮತಗಳಿಂಡ ಮುಂದಿದ್ದಾರೆ.

ಈ ವರೆಗಿನ ಮಾಹಿತಿಯಂತೆ ಆಡಳಿತಾರೂಢ ಬಿಜೆಪಿ ಸತತ ಎರಡನೇ ಬಾರಿಗೆ ಅಧಿಕಾರದ ಗದ್ದುಗೆ ಏರುವ ಹಂತ ತಲುಪಿದೆ.

Copyright � 2012 Kannadaprabha.com