Kannadaprabha The New Indian Express
ನನಗೆ ಸರಿಯಾದ ಕಪಾಳಮೋಕ್ಷವಾಗಿದೆ: ಸೋಲಿನ ಹತಾಶೆ ಹೊರಹಾಕಿದ ಪ್ರಕಾಶ್ ರೈ 
By select 
23 May 2019 12:00:00 AM IST

ಬೆಂಗಳೂರು: ಬೆಂಗಳುರು ಕೇಂದ್ರ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನಟ ಪ್ರಕಾಶ್ ರೈ ಈ ಚುನಾವಣೆಯಲ್ಲಿ ಹೀನಾಯವಾಗಿ ಸೋಲನುಭವಿಸಿದ್ದಾರೆ. ಈ ಸಾಲಿನ ಜನಾದೇಶದಲ್ಲಿ ಬಿಜೆಪಿಯ ಪಿಸಿ ಮೋಹನ್ ವಿಜಯದತ್ತ ದಾಪುಗಾಲಿಕ್ಕಿದ್ದು ಇದಕ್ಕೆ ಕಾಂಗ್ರೆಸ್ ನ ರಿಜ್ವಾನ್ ಅರ್ಷದ್ ಪ್ರಬಲ ಪೈಪೋಟಿ ಒಡ್ಡಿದ್ದಾರೆ. 

ಇದರ ನಡುವೆ ಪ್ರಕಾಶ್ ರೈ ತಮ್ಮ ಸೋಲನ್ನು ಒಪ್ಪಿಕೊಂಡಿದ್ದು "ನನಗೆ ಸರಿಯಾಗಿಯೇ ಕಪಾಳಮೋಕ್ಷವಾಗಿದೆ. ಮುಂಚಿಗಿಂತಲೂ ಹೆಚ್ಚು ಟ್ರೋಲ್, ಬೈಗುಳಗಳನ್ನು ನಾನು ಭವಿಷ್ಯದಲ್ಲಿ ನೋಡಲಿದ್ದೇನೆ. ಆದರೆ ನನ್ನ ದಾರಿಯಲ್ಲಿ ನಾನು ಮುಂದುವರಿಯುತ್ತೇನೆ, ನನ್ನ ಅಭಿಪ್ರಾಯಕ್ಕೆ ನಾನು ಅಂಟಿಕೊಳ್ಳುತ್ತೇನೆ. ಕೋಮುವಾದಿ ಭಾರತ ಮತ್ತೆ ಮುಂದುವರಿಯಲಿದೆ, ನನ್ನ ಕಷ್ಟದ ದಿನಗಳು ಇದೀಗ ಪ್ರಾರಂಭವಾಗಿದೆ.ಈ ಪ್ರಯಾಣದಲ್ಲಿ ನನ್ನೊಡನೆ ಕೈಜೋಡಿಸಿದ ಎಲ್ಲರಿಗೆ ಕೃತಜ್ಞತೆಗಳು" ಪ್ರಕಾಶ್ ರೈ ಟ್ವೀಟ್ ಮಾಡಿ ತಮ್ಮ ಹತಾಶೆ ವ್ಯಕ್ತಪಡಿಸಿದ್ದಾರೆ.
ENWJ1790

Copyright � 2012 Kannadaprabha.com