Kannadaprabha The New Indian Express
ಮಕ್ಕಳಲ್ಲಿ ಮಲಬದ್ದತೆ: ಆಹಾರ ಪದ್ಧತಿಯೇ ಮೂಲ ಕಾರಣ! 
By select 
25 May 2019 12:00:00 AM IST

ಬೆಂಗಳೂರು: ಬೆಳೆಯುವ ಮಕ್ಕಳಲ್ಲಿ ಮಲಬದ್ಧತೆ ಸರ್ವೇ ಸಾಮಾನ್ಯ, ಮಗು ಎಷ್ಟು ಬಾರಿ ಟಾಯ್ಲೆಟ್ ಗೆ ಹೋಗುತ್ತದೆ ಎಂಬುದು ಮುಖ್ಯವಲ್ಲ, ಸರಿಯಾದ ರೀತಿಯಲ್ಲಿ ಮಲ ವಿಸರ್ಜನೆ ಮಾಡುತ್ತಿದೆಯೇ ಎಂಬುದನ್ನು ಗಮನಿಸಬೇಕಾಕಗಿದೆ.

ಮಕ್ಕಳು ವಾರದಲ್ಲಿ ಮೂರು ಬಾರಿ ಮಲ ವಿಸರ್ಜನೆ ಮಾಡುವುದು, ಮಲ ವಿಸರ್ಜನೆ ಮಾಡುವಾಗ ತೊಂದರೆ ಅನುಭವಿಸುವುದು ಹಾಗೂ ಗಟ್ಟಿ ಮಲ ವಿಸರ್ಜನೆ, ಇವು ಮಕ್ಕಳ ಮಲ ಬದ್ಧತೆಯ ಲಕ್ಷಣಗಳಾಗಿವೆ.

ಫೈಬರ್ ಹಾಗೂ ನೀರಿನ ಕೊರತೆಯಿಂದ ಮಲಬದ್ಧತೆ ಉಂಟಾಗುತ್ತದೆ. ಜೊತೆಗೆ ಚೀಸ್, ಬ್ರೆಡ್, ಜಂಕ್ ಫುಡ್, ಮಾಂಸಹಾರ, ಮುಂತಾದ ಆಹಾರಗಳ ಹೆಚ್ಚಿನ ಸೇವನೆ ಮಲಬದ್ಧತೆಗೆ ಕಾರಣವಾಗಿದೆ, ಆಹಾರದ ಹೊರತಾಗಿ ಖನಿಜಾಂಶ ಕೊರತೆಯೂ ಸಹ ಕಾರಣವಾಗಿದೆ,.

ಗಟ್ಟಿ ಪದಾರ್ಥದ ಆಹಾರ ಸೇವಿಸದೇ ಹೆಚ್ಚಾಗಿ ಹಾಲು ಕುಡಿಯುವುದು ಒಂದು ಕಾರಣವಾಗಿದ್ದು ಪದೇ ಪದೇ ಮಲಬಧ್ಧತೆ ಸಮಸ್ಯೆ ಉಂಟಾಗುತ್ತದೆ,  ಎಲ್ಲಾ ಮಕ್ಕಳಲ್ಲಿ ಮಲಬದ್ಧತೆಗೆ ಸಾಮಾನ್ಯವಾಗಿ ಕಾರಣವಾಗಹುವ ಅಂಶ ವೆಂದರೆ ದ್ರವ ಆಹಾರ ಸೇವಿಸುತ್ತಿದ್ದು ನಂತರ ಘನ ಪದಾರ್ಥ ಸೇವನೆ ಮಾಡುವ ಬದಲಾವಣೆಯೂ ಕೂಡ ಒಂದು ಪ್ರಮುಖ ಕಾರಣ.

ಮಕ್ಕಳು ಅನಾರೋಗ್ಯಕ್ಕೀಡಾದಾಗ ಮಲಬದ್ಧತೆ ಸಮಸ್ಯೆ ಕಾಡುತ್ತದೆ, ಹಾಗೆಯೇ ವಶ ಪಾರಂಪರ್ಯವಾಗಿ ಈ ಸಮಸ್ಯೆ ಇದ್ದರೇ ಮಕ್ಕಳಿಗೆ  ಮುಂದುವರಿಯುತ್ತದೆ.

ಇಂದಿನ ಮಕ್ಕಳಿಗೆ ಮಲ ವಿಸರ್ಜನೆ ಬಗ್ಗೆ ತರಬೇತಿ ನೀಡುವಾಗ ಕೂಡ ಮಲಬದ್ಧತೆ ಸಮಸ್ಯೆ ಕಂಡು ಬರುತ್ತದೆ, ಏಕೆಂದರೇ ಪೋಷಕರು ಮಕ್ಕಳನ್ನು ಕರೆ ತಂದು ಟಾಯ್ಲೆಟ್ ಮಾಡುವಂತೆ ಕೂರಿಸುತ್ತಾರೆ, ಆಗಿನ್ನು ಮಕ್ಕಳು ಸಿದ್ಧವಾಗಿರುವುದಿಲ್ಲ,  ಜೊತೆಗೆ ಫನ್ ಗೇಮ್ ಗಳನ್ನು ಆಡುವಾಗ ಮಕ್ಕಳಿಗೆ ಎದ್ದು ಹೋಗಲು ಮನಸ್ಸಿರುವುದಿಲ್ಲ, ಬೇಸಿಗೆಯಲ್ಲಿ ಹೆಚ್ಚಿನ ಬಿಸಿಲ ದಗೆ ಹಾಗೂ ಬೆವರುವಿಕೆಯಿಂದ ದೇಹದಲ್ಲಿ ನರಿನ ಪ್ರಮಾಣ ಕಡಿಮೆಯಾಗುವುದರಿಂದಲೂ ಮಲಬದಗ್ಧತೆ ಉಂಚಾಗುತ್ತದೆ ಎಂದು ಸ್ಮೈಲ್ಸ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

Copyright � 2012 Kannadaprabha.com