Kannadaprabha The New Indian Express
ಧಾರವಾಡ: ಭೀಕರ ಅಪಘಾತದಲ್ಲಿ ಐವರ ದುರ್ಮರಣ! 
By select 
26 May 2019 12:00:00 AM IST

ಧಾರವಾಡ: ಲಾರಿ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಐವರು ದಾರುಣ ಸಾವನ್ನಪ್ಪಿರುವ ಘಟನೆ ನವಲಗುಂದದ ಅಮರಗೋಳದಲ್ಲಿ ನಡೆದಿದೆ.

ಅಪಘಾತದಲ್ಲಿ ಬಾಗಲಕೋಟೆ ಮೂಲದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು 7 ವರ್ಷದ ಶರಣ ಜಗಜ್ಜಿನ್ನಿ, 12 ವರ್ಷದ ವರ್ಷಾ ಜಗಜ್ಜಿನ್ನಿ, 18 ವರ್ಷದ ಲೇಖಾಶ್ರೀ ಹಂಡಿ, 40 ವರ್ಷದ ರವಿ ಹಂಡಿ ಮತ್ತು 14 ವರ್ಷದ ನವೀನಕುಮಾರ್ ಮೃತ ದುರ್ವೈವಿಗಳು.

ಇನ್ನು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ನವಲಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರಿನ ಟೈರು ಸ್ಫೋಟಗೊಂಡು ಲಾರಿಗೆ ಡಿಕ್ಕಿ ಹೊಡೆದಿದ್ದು ಈ ಭೀಕರ ಅಪಘಾತ ಕಾರಣವಾಗಿದೆ.

Copyright � 2012 Kannadaprabha.com