Kannadaprabha The New Indian Express
ವಿಶ್ವಮಟ್ಟದಲ್ಲಿ ಕಳೆದುಕೊಂಡಿದ್ದ ಸ್ಥಾನವನ್ನು ಭಾರತ ಮರಳಿ ಪಡೆಯಲಿದೆ: ಮೋದಿ 
By select 
26 May 2019 12:00:00 AM IST

ಅಹ್ಮದಾಬಾದ್: ಭಾರತದ ವಿಶ್ವಮಟ್ಟದಲ್ಲಿ ಕಳೆದುಕೊಂಡಿದ್ದ ಸ್ಥಾನವನ್ನು ಮರಳಿಪಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

2019 ರ ಲೋಕಸಭಾ ಚುನಾವಣೆ ಗೆಲುವಿನ ಬಳಿಕ ಮೊದಲ ಬಾರಿಗೆ ಗುಜರಾತ್ ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ  ಮಾತನಾಡಿರುವ ಪ್ರಧಾನಿ, ದೇಶದ ಇತಿಹಾಸದಲ್ಲಿ 1942-1947 ರ ವರೆಗಿನಂತೆಯೇ  ಮುಂದಿನ 5 ವರ್ಷ ಅತ್ಯಂತ ಮಹತ್ವದ್ದಾಗಿರಲಿದೆ ಎಂದು ಮಾರ್ಮಿಕವಾಗಿ ಮೋದಿ ನುಡಿದಿದ್ದಾರೆ. 

ಮುಂದಿನ 5 ವರ್ಷಗಳಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ತಾನು ಕಳೆದುಕೊಂಡಿರುವ ಸ್ಥಾನವನ್ನು ಮರಳಿ ಪಡೆಯಲಿದೆ ಎಂದು ಮೋದಿ ಹೇಳಿದ್ದಾರೆ. 

Copyright � 2012 Kannadaprabha.com