Kannadaprabha The New Indian Express
'ಖಿಲಾಡಿ' ಖ್ಯಾತಿಯ ಬಾಲಿವುಡ್ ನಟ ದಿನ್ಯಾರ್ ಕಂಟ್ರಾಕ್ಟರ್ ನಿಧನ 
By select 
05 Jun 2019 12:00:00 AM IST

ಮುಂಬೈ: ಬಾಲಿವುಡ್ ಹಿರಿಯ ನಟ "ಬಾದ್ ಶಾ", "ಖಿಲಾಡಿ" ಖ್ಯಾತಿಯ ದಿನ್ಯಾರ್ ಕಾಂಟ್ರಾಕ್ಟರ್ (79) ಬುಧವಾರ ಬೆಳಿಗ್ಗೆ ಮುಂಬೈನಲ್ಲಿ ನಿಧನರಾದರು.

ವಯೋಸಹಜ ಆರೋಗ್ಯ ಸಮಸ್ಯೆಗಳಿಂದಾಗಿ ಅವರು ಮರಣಿಸಿದರೆಂದು ಕುಟುಂಬ ಮೂಲಗಳು ಹೇಳಿದೆ. ಇಂದು ಮಧ್ಯಾಹ್ನ  3.30ಕ್ಕೆ ಪಾರ್ಸಿಗಳ ರುದ್ರಭೂಮಿ ವರ್ಲಿಯ ಪ್ರಾರ್ಥನಾ ಸಭಾಂಗಣದಲ್ಲಿ ಕಂಟ್ರಾಕ್ಟರ್ ಅಂತ್ಯ ಸಂಸ್ಕಾರ ನೆರವೇರಲಿದೆ.

ರಂಗಭೂಮಿ ಹಾಗೂ ಬಾಲಿವುಡ್ ಸಿನಿಮಾಗಳಲ್ಲಿ ತಮ್ಮ ಹಾಸ್ಯಮಿಶ್ರಿತ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟ ಈ ವರ್ಷಾರಂಭದಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು.
>
ಪ್ರಧಾನಿ ನರೇಂದ್ರ ಮೋದಿ, ಸಚಿವೆ ಸ್ಮೃತಿ ಇರಾನಿ ಸೇರಿ ಹಲವು ಗಣ್ಯರು ಹಿರಿಯ ನಟನ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.

Copyright � 2012 Kannadaprabha.com