Kannadaprabha The New Indian Express
ಬಡವರ, ದಲಿತರ ಪರ ಧ್ವನಿ ಎತ್ತಿದ್ದಕ್ಕೆ ನನ್ನನ್ನು ಟಾರ್ಗೆಟ್-ಸಿದ್ದರಾಮಯ್ಯ 
By select 
07 Jun 2019 12:00:00 AM IST

ಬೆಂಗಳೂರು: ಬಡವರು, ದೀನ ದಲಿತರ ಪರ ನಾನು ಧ್ವನಿ ಎತ್ತುತ್ತೇನೆ, ಧ್ವನಿ ಎತ್ತುವುದಕ್ಕಾಗಿ ತಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ. 

ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸರ ಪುಣ್ಯಸ್ಮರಣೆ ಹಿನ್ನಲೆಯಲ್ಲಿ ಟ್ವೀಟ್ ಮಾಡಿರುವ ಅವರು, ಬಡವರು, ಶೋಷಿತರ ಪರ ಕೆಲಸ ಮಾಡಿದರೆ ಕಷ್ಟ. ಅಂತವರನ್ನು ವರ್ತಮಾನ ಕ್ರೂರವಾಗಿ ನೋಡಿಕೊಳ್ಳುತ್ತದೆ. ಆದರೆ ಇತಿಹಾಸ ಮಾತ್ರ ನೆನಪಿಟ್ಟುಕೊಳ್ಳುತ್ತದೆ. ಅದೊಂದು ಸಾರ್ವಕಾಲಿಕ ಸತ್ಯ ಎನ್ನುವುದು ತಮ್ಮ ಅನುಭವಕ್ಕೆ ಬರುತ್ತಿದೆ ಎಂದು ಬರೆದುಕೊಂಡಿದ್ದಾರೆ.

ಬಡವರು, ಹಿಂದುಳಿದವರು, ದಲಿತರ ಪರ ಧ್ವನಿ ಎತ್ತುತ್ತಾನೆ ಎಂಬ ಕಾರಣಕ್ಕಾಗಿ ತಮ್ಮನ್ನು ರಾಜಕೀಯ ಪಕ್ಷಗಳ ವಿರೋಧಿಗಳು ಹಾಗೂ ಸ್ವಪಕ್ಷೀಯರು ಗುರಿ ಮಾಡಿದ್ದಾರೆ. ಡಿ ದೇವರಾಜ ಅರಸು ಅವರ ಜನಪರ ಕೆಲಸಗಳು ಅವರನ್ನು ಕೈ ಹಿಡಿದವು. ಆದರೆ ನಮ್ಮನ್ನು ಜನರು ಕೈಬಿಟ್ಟರು ಎಂಬ ಅರ್ಥದಲ್ಲಿ ಹಾಗೂ ಸ್ವಪಕ್ಷೀಯರ ಟೀಕೆ ಹಾಗೂ ವಿರೋಧ ಕಟ್ಟಿಕೊಳ್ಳುವಂತಾಗಿದೆ ಎಂದು ಸಾಂದರ್ಭಿಕವಾಗಿ, ಸೂಚ್ಯವಾಗಿ ಸಿದ್ದರಾಮಯ್ಯ ತಮಗಾಗುತ್ತಿರುವ ನೋವನ್ನು ವ್ಯಕ್ತಪಡಿಸಿದ್ದಾರೆ.

Copyright � 2012 Kannadaprabha.com