Kannadaprabha The New Indian Express
ಬೆಂಗಳೂರು ದಕ್ಷಿಣ ಡಿಸಿಪಿಯಾಗಿ ರೋಹಿಣಿ ಅಧಿಕಾರ ಸ್ವೀಕಾರ 
By select 
11 Jun 2019 12:00:00 AM IST

ಬೆಂಗಳೂರು: ಕರ್ನಾಟಕದ ಸಿಂಗಂ ಎಂದೇ ಖ್ಯಾತರಾದ ಡಿಸಿಪಿ, ಎಸ್​ಪಿ ಕೆ.ಅಣ್ಣಾಮಲೈ ಅವರು ಇತ್ತೀಚೆಗೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾಗಿದ್ದ ಬೆಂಗಳೂರು ದಕ್ಷಿಣ ಡಿಸಿಪಿ ಸ್ಥಾನಕ್ಕೆ ರೋಹಿಣಿ ಕಟೋಚ್ ಸೆಪಟ್ ನೇಮಕಗೊಂಡಿದ್ದಾರೆ.

ಇಂದು ಬೆಂಗಳೂರಿನ ಕಚೇರಿಯಲ್ಲಿ ಕೆ.ಅಣ್ಣಾಮಲೈ ಅವರಿಂದ ರೋಹಿಣಿ ಕಟೋಚ್ ಸೆಪಟ್ ಅಧಿಕಾರ ಸ್ವೀಕರಿಸಿದರು. ಈ ವೇಳೆ ಅಣ್ಣಾಮಲೈ ಅಧಿಕಾರ ಹಸ್ತಾಂತರಿಸಿ ಸೆಪಟ್ ಅವರನ್ನು ಶುಭ ಕೋರಿದರು.

ರೋಹಿಣಿ ಕಟೋಚ್ ಸೆಪಟ್ ಅವರಿಗೆ ಈ ಹಿಂದೆಯೂ ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿದ ಅನುಭವವಿದ್ದು, ಕೋಲಾರದ ಪೊಲೀಸ್​ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

Copyright � 2012 Kannadaprabha.com