Kannadaprabha The New Indian Express
ರಾಜ್ಯಸಭೆ ಬಿಜೆಪಿ ನಾಯಕರಾಗಿ ತಾವರ್‌ ಚಂದ್‌ ಗೆಹ್ಲೋಟ್‌ ಆಯ್ಕೆ 
By select 
12 Jun 2019 12:00:00 AM IST

ನವದೆಹಲಿ: ರಾಜ್ಯಸಭೆಯ ಬಿಜೆಪಿ ಪಕ್ಷದ ನಾಯಕರಾಗಿ ಹಿರಿಯ ಮುಖಂಡ ಹಾಗೂ ಕೇಂದ್ರ ಸಚಿವ ತಾವರ್‌ ಚಂದ್‌ ಗೆಹ್ಲೋಟ್‌ ರನ್ನು ಆಯ್ಕೆ ಮಾಡಲಾಗಿದೆ. 

ಬಿಜೆಪಿಯ ಹಿರಿಯ ದಲಿತ ಮುಖಂಡ ತಾವರ್‌ಚಂದ್‌ ಗೆಹ್ಲೋಟ್‌ ಅವರು ರಾಜ್ಯಸಭೆಯಲ್ಲಿ ಪಕ್ಷದ ನಾಯಕರಾಗಿ ನೇಮಕಗೊಂಡಿದ್ದಾರೆ. ಕಳೆದ ಅವಧಿಯಲ್ಲಿ ಸದನ ನಾಯಕರಾಗಿದ್ದ ಅರುಣ್‌ ಜೇಟ್ಲಿ ಅನಾರೋಗ್ಯದ ಕಾರಣದಿಂದ ಈ ಬಾರಿ ಸಂಪುಟ ಸೇರಿಲ್ಲ. ಹೀಗಾಗಿ ಈಗ ಅವರ ಸ್ಥಾನಕ್ಕೆ ಗೆಹ್ಲೋಟ್‌ ಅವರನ್ನು ನೇಮಕ ಮಾಡಲಾಗಿದೆ. 

ತಾವರ್‌ ಚಂದ್‌ ಅವರು ನರೇಂದ್ರ ಮೋದಿ ಸಂಪುಟದಲ್ಲಿ ಎರಡನೇ ಅವಧಿಗೂ ಸಚಿವರಾಗಿ ಮುಂದುವರಿದಿದ್ದಾರೆ. ಗೆಹ್ಲೋಟ್ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಜವಾಬ್ದಾರಿ ಹೊತ್ತಿದ್ದಾರೆ. 1996ರಿಂದ 2009ರ ವರೆಗೆ ಮಧ್ಯ ಪ್ರದೇಶದ ಶಾಹಜಾಪುರ ಲೋಕಸಭೆ ಕ್ಷೇತ್ರ ಪ್ರತಿನಿಧಿಸಿದ್ದರು. 2009ರಲ್ಲಿ ಕಾಂಗ್ರೆಸ್‌ನ ಸಜ್ಜನ್‌ ಸಿಂಗ್‌ ವರ್ಮಾ ವಿರುದ್ಧ ಸೋಲು ಕಂಡಿದ್ದರು. ಇದಾಗಿ 2012ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿ ಗೆಹ್ಲೋಟ್ ಅವರು, 2018ರಲ್ಲಿ ಮಧ್ಯಪ್ರದೇಶದಿಂದ ಮೇಲ್ಮನೆಗೆ ಮರು ಆಯ್ಕೆಯಾಗಿದ್ದಾರೆ. 2024ಕ್ಕೆ ಅವರ ರಾಜ್ಯಸಭೆ ಅವಧಿ ಕೊನೆಗೊಳ್ಳಲಿದೆ. 

Copyright � 2012 Kannadaprabha.com