Kannadaprabha The New Indian Express
ಸಿಕ್ಸ್ ಹೀಗೂ ಹೊಡಿಬೌದು; ರಣವೀರ್‌ಗೆ ಬ್ಯಾಟ್‌ನಿಂದ ಹೊಡೆದ ದೀಪಿಕಾ: ವಿಡಿಯೋ ವೈರಲ್! 
By select 
12 Jun 2019 12:00:00 AM IST

ಮುಂಬೈ: ಸದ್ಯ ವಿಶ್ವಕಪ್ ಕ್ರಿಕೆಟ್ ಮಹಾ ಜ್ವರ ಜಗತ್ತಿನಾದ್ಯಂತ ಹಬ್ಬಿದ್ದು ಈ ಮಧ್ಯೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಮ್ಮ ಪತಿ ರಣವೀರ್ ಸಿಂಗ್‌ಗೆ ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ದೀಪಿಕಾ ಪಡುಕೋಣೆ ಬ್ಯಾಟ್ ನಿಂದ ಹೊಡೆದಿರುವ ಫೋಟೋವನ್ನು ಟ್ವೀಟ್ ಮಾಡಿರುವ ರಣವೀರ್ ಸಿಂಗ್ ಇದು ನನ್ನ ಜೀವನದ ಕತೆ. ರಿಯಲ್ ಹಾಗೂ ರೀಲ್ ಎಂದು ಅಡಿಬರಹ ಕೊಟ್ಟಿದ್ದಾರೆ. 

ಇನ್ನು ರಣವೀರ್ ಸಿಂಗ್ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಬಯೋಪಿಕ್ ನಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕಪಿಲ್ ದೇವ್ ಪತ್ನಿಯಾಗಿ ದೀಪಿಕಾ ರೋಮಿ ದೇವ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ಕಬೀರ್ ಖಾನ್ ನಿರ್ದೇಶಿಸುತ್ತಿದ್ದಾರೆ.

Copyright � 2012 Kannadaprabha.com