Kannadaprabha The New Indian Express
ಹೆಚ್ಚಿದ ಬಿಸಿಲ ಬೇಗೆ: ದೆಹಲಿ, ರಾಜಸ್ತಾನ ಸೇರಿದಂತೆ ಉತ್ತರ ಭಾರತದಲ್ಲಿ ಮದ್ದೂರು ಎಳನೀರಿನದ್ದೇ 'ಹವಾ'! 
By select 
13 Jun 2019 12:00:00 AM IST

ಮೈಸೂರು: ದೆಹಲಿ, ರಾಜಸ್ತಾನ ಸೇರಿದಂತೆ ಉತ್ತರ ಭಾರತದ  ಹಲವು ರಾಜ್ಯಗಳಲ್ಲಿ ಬಿಸಿಲ ತಾಪಾಮಾನ ಏರಿಕೆಯಾಗಿದೆ, ಹೀಗಾಗಿ ಮಂಡ್ಯ, ಮೈಸೂರು ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡುತ್ತಿದೆ.

ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಪ್ರತಿ ಎಳನೀರಿನ ಬೆಲೆ 32 ರು ತಲುಪಿದೆ, ಮದ್ದೂರು ಬಹುದೊಡ್ಡ ಎಳನೀರು ಮಾರುಕಟ್ಟೆಯಾಗಿದೆ, ಪ್ರತಿದಿನ  60ರಿಂದ 80 ಟ್ರಕ್ ಅಂದರೆ ಸುಮಾರು 8 ಲಕ್ಷ ಎಳನೀರನ್ನು ದೇಶದ ಹಲವು ಭಾಗಗಳಿಗೆ ಪೂರೈಸಲಾಗುತ್ತದೆ.

ಉತ್ತರ ಭಾರತದ ರಾಜ್ಯಗಳ ಟ್ರಕ್ಕುಗಳು ಮದ್ದೂರು ಎಳನೀರು ಮಾರುಕಟ್ಟೆ ಬಳಿ ಸಾಲಾಗಿ ನಿಂತಿರುತ್ತವೆ, ಇತ್ತೀಚಿನ ದಿನಗಳಲ್ಲಿ ಪಾಂಡವಪುರ, ಗೌಡಹಳ್ಳಿ, ಮಂಡ್ಯ ಮತ್ತು ಮತ್ತು ಚನ್ನರಾಯಪಟ್ಟಣ ಮಾರುಕಟ್ಟೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಬೇಡಿಕೆ ಹೆಚ್ಚುತ್ತಿದೆ. ಮೈಸೂರು ಭಾಗದಲ್ಲಿ ಬಿಸಿಲ ತಾಪ ಹೆಚ್ಚುತ್ತಿರುವ ಕಾರಣದಿಂದಾಗಿ ಏಳನೀರಿಗೆ ಬೇಡಿಕೆ ಹೆಚ್ಚಾಗಿದ್ದು ಪರಿಣಾಮ ದರ ಕೂಡ ಏರಿದೆ.

ಈ ಮೊದಲು ಇಲ್ಲಿನ ರೈತರು ತಾವೇ ನೇರವಾಗಿ 15 ರಿಂದ 18 ರು ಗೆ ಮಾರಾಟಚ ಮಾರಾಟ ಮಾಡುತ್ತಿದ್ದರು. ಈಗ  4 ಸಾವಿರ ಎಳನೀರನ್ನು ಮಾರುಕಟ್ಟೆಗೆ ತಂದಿರುವುದರಿಂದ ಕಮಿಷನ್, ಸಾಗಣೆ ವೆಚ್ಚ ಎಲ್ಲಾ ಕಳೆದು ಪ್ರತಿ ಎಳನೀರಿಗೆ 27 ರು ಸಿಗುತ್ತಿದೆ ಎಂದು ರೈತರೊಬ್ಬರು ತಿಳಿಸಿದ್ದಾರೆ.

ಮಹಾರಾಷ್ಟ್ರ, ದೆಹಲಿ, ಆಂಧ್ರಪ್ರದೇಶ ಮತ್ತು ರಾಜಸ್ತಾನಗಳಲ್ಲಿ ಎಳನೀರಿಗೆ ಭಾರಿ ಬೇಡಿಕೆ ಹೆಚ್ಚುತ್ತಿದೆ ಪ್ರತಿದಿನ 120 ಲೋಡ್ ಗೆ ಡಿಮ್ಯಾಂಡ್ ಇದೆ, ಆದರಕೆ 40 -60 ಲೋಡ್ ಮಾತ್ರ ಪೂರೈಸಲು ಸಾಧ್ಯವಾಗುತ್ತಿದೆ ಎಂದು ಕಮಿಷನ್ ಏಜೆಂಟ್ ತಿಳಿಸಿದ್ದಾರೆ.

ಸೀಸನ್ ನಲ್ಲಿ  ಪ್ರತಿದಿನ ಸುಮಾರು 1 ಕೋಟಿ ರು ವಹಿವಾಟು ನಡೆಯುತ್ತದೆ. ಮಂಡ್ಯದಲ್ಲಿ ಮತ್ತೆ ಮೂರು ಎಳನೀರು ಮಾರುಕಟ್ಟೆ ಆರಂಭಿಸಲು ಯೋಜಿಸಿದೆ.

Copyright � 2012 Kannadaprabha.com