ವಿದ್ಯಾರ್ಥಿ ಮತದಾರರನ್ನು ಓಲೈಸಲು ಮುಂದಾದ ರಾಜಕೀಯ ಪಕ್ಷಗಳು

ನಗರ ಮತ್ತು ಹಳ್ಳಿಗಳ ಮತದಾರರನ್ನು ಓಲೈಸುತ್ತಿರುವ ರಾಜಕೀಯ ಪಕ್ಷಗಳು ವಿದ್ಯಾರ್ಥಿ ಮತದಾರರನ್ನು ಬಿಟ್ಟಿಲ್ಲ, ಬಿಜೆಪಿ ವಿದ್ಯಾರ್ಥಿ ಘಟಕದ ಎಬಿವಿಪಿ ಮತ್ತು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ನಗರ ಮತ್ತು ಹಳ್ಳಿಗಳ ಮತದಾರರನ್ನು ಓಲೈಸುತ್ತಿರುವ ರಾಜಕೀಯ ಪಕ್ಷಗಳು ವಿದ್ಯಾರ್ಥಿ ಮತದಾರರನ್ನು ಬಿಟ್ಟಿಲ್ಲ, ಬಿಜೆಪಿ ವಿದ್ಯಾರ್ಥಿ ಘಟಕದ ಎಬಿವಿಪಿ ಮತ್ತು ಕಾಂಗ್ರೆಸ್ ನ ಎಸ್ ಯುಐ ಗಳು ವಿದ್ಯಾರ್ಥಿಗಳ ಬಳಿ ಪ್ರಚಾರ ಮಾಡುತ್ತಿವೆ.
ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ನಮ್ಮ ಪ್ರತಿನಿಧಿಗಳು ಮತದಾನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುತ್ತಿದ್ದಾರೆ, ತಮ್ಮ ಪ್ರಣಾಳಿಕೆಗಳ ಅನುಗುಣವಾಗಿ ಕಾಂಗ್ರೆಸ್ ಗೆ ಮತ ಚಲಾಯಿಸುವಂತೆ ಎನ್ ಎಸ್ ಯು ಐ ಅಧ್ಯಕ್ಷ ಮಂಜುನಾಥ್ ಗೌಡ ಹೇಳಿದ್ದಾರೆ.
ಎಬಿವಿಪಿ ಕೂಡ ತಿಂಗಳ ಹಿಂದೆಯೇ ಪ್ರಚಾರ ಆರಂಭಿಸಿದೆ, ಕಾಲೇಜು ಕ್ಯಾಂಪಸ್ ಗಳಿಗೆ ಬೇಟಿ ನೀಡಿ ಮತದಾನದ ಮಹತ್ವಗ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ,ಜೊತೆಗೆ ಯಾವುದೇ ಕಾರಣಕ್ಕೂ ನೋಟಾ ಒತ್ತದಂತೆ ಹೇಳುತ್ತಿದ್ದೇವೆ.
ಎರಡು ಸಂಘಟನೆಗಳ ವಿದ್ಯಾರ್ಥಿಗಳ ಪ್ರಣಾಳಿಕೆಗಳು ಬೇರೆ ಬೇರೆಯಾಗಿವೆ,  ಸಮಾನತೆಯ ಶಿಕ್ಷಣಕ್ಕೆ ಕಾಂಗ್ರೆಸ್ ಗೆ ಮತ ನೀಡುವಂತೆ ಪ್ರಚಾರ ಮಾಡುತ್ತಿದ್ದಾರೆ, 
ಭ್ರಷ್ಟಾಚಾರ, ಕಪ್ಪು ಹಣ ಮತ್ತು ಭಯೋತ್ಪಾದನೆ ವಿರುದ್ಧ ಹೋರಾಟ ಮಾಡುವ ಬಿಜೆಪಿಗೆ ಮತ ಹಾಕುವಂತೆ ಎಬಿವಿಪಿ ಪ್ರಚಾರ ಮಾಡುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com