ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಹಬ್ಬಕ್ಕೆ ಗೂಗಲ್​ ಡೂಡಲ್​ ಗೌರವ

ಇಂದಿನಿಂದ (ಗುರುವಾರ) ಹದಿನೇಳನೇ ಲೋಕಸಭೆ ಚುನಾವಣೆಗೆ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ ಸಾಕ್ಷಿಯಾಗುತ್ತಿದೆ. ಈ ಸಂದರ್ಭದಲ್ಲಿ ಜಾಗತಿಕ ಸರ್ಚ್ ಇಂಜಿನ್ ಸಂಸ್ಥೆ....
ಗೂಗಲ್​ ಡೂಡಲ್
ಗೂಗಲ್​ ಡೂಡಲ್
ನವದೆಹಲಿ: ಇಂದಿನಿಂದ (ಗುರುವಾರ) ಹದಿನೇಳನೇ ಲೋಕಸಭೆ ಚುನಾವಣೆಗೆ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ ಸಾಕ್ಷಿಯಾಗುತ್ತಿದೆ. ಈ ಸಂದರ್ಭದಲ್ಲಿ ಜಾಗತಿಕ ಸರ್ಚ್ ಇಂಜಿನ್ ಸಂಸ್ಥೆ ಗೂಗಲ್ "ಗೂಗಲ್ ಡೂಡಲ್" ಮೂಲಕ ಸಾರ್ವತ್ರಿಕ ಚುನಾವಣೆ ಪ್ರಾರಂಭವನ್ನು ಸಾರುತ್ತಿದೆ.
ಚುನಾವಣೆಯ ಮೊದಲ ಹಂತದ ಮತದಾನದ ದಿನವಾದ ಗುರುವಾದಂದು ಗೂಗಲ್ ಈ ವಿಶೇಷ ಡೂಡಲ್ ರಚಿಸಿದೆ.ತೋರು ಬೆರಳಿಗೆ ಶಾಯಿ ಹಚ್ಚಿರುವ ಚಿತ್ರವನ್ನು ಡೂಡಲ್ ನಲ್ಲಿ ತೋರಿಸುತ್ತಿದ್ದು ಒಮ್ಮೆ ಆ ಬೆರಳ ಗುರುತನ್ನು ಕ್ಲಿಕ್ಕಿಸಿದರೆ ಮತದಾನ ಪ್ರಕ್ರಿಯೆಯ ವಿವರಗಳು, ಮೊದಲ ಬಾರಿಗೆ ಮತದಾನ ಮಾಡುವವರಿಗಾಗಿ ಅಗತ್ಯ ಮಾಹಿತಿಗಳನ್ನು ನಾವು ಕಾಣಬಹುದು.
ಮತದಾರರ ಪಟ್ಟಿಯಲ್ಲಿ ಹೆಸರುಳ್ಳವರಷ್ತೇ ಮತದಾನ ಮಾಡಬಹುದು. ಮತದಾರರು ಮತದಾನದ ಬೂತ್ ಗಳಲ್ಲಿ ಈಮಾಹಿತಿ ಪಡೆಯಬಹುದು ಎನ್ನುವ ಸಾಮಾನ್ಯ ಮಾಹಿತಿಗಳನ್ನು ಇಲ್ಲಿ ನಾವು ಪಡೆಯಬಹುದು.
ಏಪ್ರಿಲ್ 11, ಎಪ್ರಿಲ್ 18, ಏಪ್ರಿಲ್ 23, ಎಪ್ರಿಲ್ 29, ಮೇ 6, ಮೇ 12 ಮತ್ತು ಮೇ 19 ಹೀಗೆ ಏಳು ಹಂತಗಳಲ್ಲಿ ಬಾರತದ ಕೆಳಮನೆ ಎಂದು ಕರೆಯಲ್ಪಡುವ ಲೋಕಸಭೆಗೆ ಚುನಾವಣೆ ನಡೆಯಲಿದೆ. ಒಟ್ಟು 543 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮೇ 23 ರಂದು ಮತಎಣಿಕೆ ನಡೆಯಲಿದೆ.
ಕರ್ನಾಟಕದಲ್ಲಿ ಒಟ್ಟು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು ಏಪ್ರಿಲ್ 18ಕ್ಕೆ ಮೊದಲ ಹಂತ ಹಾಗೂ ಏಪ್ರಿಲ್ 23ಕ್ಕೆ ಎರಡನೇ ಹಂತದಲ್ಲಿ ತಲಾ ಹದಿನಾಲ್ಕು ಕ್ಷೇತ್ರಗಳೈಗೆ ಮತದಾನ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com