ಪ್ರಧಾನಿ ಮಧ್ಯ ಪ್ರವೇಶಿಸಿದರೂ ಚಿಕ್ಕಮಗಳೂರಿನ ಈ ಕುಗ್ರಾಮ ಉದ್ಧಾರವಾಗಲೇ ಇಲ್ಲ!

ಮೂಡಿಗೆರೆ ತಾಲ್ಲೂಕಿನ ಕೊಟ್ಚಿಗೆಹಾರ ಸಮೀಪ ಇರುವ ಬಾಲೂರು ಅರಣ್ಯ ಪ್ರದೇಶದ ಮಧ್ಯದಲ್ಲಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕಿನ ಕೊಟ್ಚಿಗೆಹಾರ ಸಮೀಪ ಇರುವ ಬಾಲೂರು ಅರಣ್ಯ ಪ್ರದೇಶದ ಮಧ್ಯದಲ್ಲಿ ಒಂದು ಹಳ್ಳಿಯಿದೆ. ಅಲೆಕನ್ ಹೊರಟ್ಟಿ ಹೆಸರಿನ ಈ ಹಳ್ಳಿ ಪ್ರಕೃತಿಯ ಸೌಂದರ್ಯದಿಂದ ಮೇಳೈಸಿದ್ದರೂ ಕೂಡ ಜನರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.
ಈ ಹಳ್ಳಿಯಲ್ಲಿ ಸುಮಾರು 30 ಕುಟುಂಬಗಳಿವೆ. ಜನರ ಪಾಡು ಹೇಳತೀರದು. ಮಳೆಗಾಲದಲ್ಲಂತೂ ಯಾತನಾಮಯ. ಎರಡು ವರ್ಷದ ಹಿಂದೆ ತಮ್ಮ ಹಳ್ಳಿಯ ಸಮಸ್ಯೆಗಳನ್ನು ವಿವರಿಸಿ ಹೈಸ್ಕೂಲ್ ವಿದ್ಯಾರ್ಥಿನಿ ನಮನ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಳು. ಪ್ರಧಾನ ಮಂತ್ರಿಗಳು ತಕ್ಷಣವೇ ಪತ್ರಕ್ಕೆ ಸ್ಪಂದಿಸಿ ಅದನ್ನು ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಗೆ ಕ್ರಮ ಕೈಗೊಳ್ಳಲು ವರ್ಗಾಯಿಸಿದ್ದರು. ಈ ಸುದ್ದಿ ಪತ್ರಿಕೆಗಳಲ್ಲಿ ಕೂಡ ಬಂದಿತ್ತು. ನಂತರ ಕೆಲವು ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಅಭಿವೃದ್ಧಿ ಕೆಲಸ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.
ಅದೆಲ್ಲ ನಡೆದು ಎರಡು ವರ್ಷವಾಯಿತು. ಆದರೆ ಯಾವುದೇ ಮಹತ್ವದ ಕೆಲಸಗಳು ನಡೆದಿಲ್ಲ, ಗ್ರಾಮದ ಪರಿಸ್ಥಿತಿ ಹಾಗೆಯೇ ಉಳಿದಿದೆ. ಅಧಿಕಾರಿಗಳು ತಮ್ಮ ಗ್ರಾಮಕ್ಕೆ ಭೇಟಿ ಕೊಟ್ಟಾಗ ತಮ್ಮ ಸಮಸ್ಯೆ ಇನ್ನು ಕೊನೆಯಾಗಬಹುದು ಎಂದು ಖುಷಿಯಾಗಿದ್ದರು. ಆದರೆ ಆ ಖುಷಿ ಹೆಚ್ಚು ದಿನ ಉಳಿಯಲಿಲ್ಲ. ಪ್ರಧಾನಿಯ ಮಧ್ಯೆ ಪ್ರವೇಶಿಸಿ ಜಿಲ್ಲಾಡಳಿತ ಗ್ರಾಮಕ್ಕೆ ಒಮ್ಮೆ ಭೇಟಿ ಕೊಟ್ಟು ಪರಿಶೀಲಿಸಿತಾದರೂ ಅಷ್ಟೇ ಬೇಕ ಮರೆತುಬಿಟ್ಟಿತು. ತಮ್ಮ ಜೀವನಮಟ್ಟ ಸುಧಾರಿಸಲು ಏನೂ ಆಗಲಿಲ್ಲ ಎಂದ ಮೇಲೆ ನಾವಿನ್ನು ಯಾವುದೇ ನಿರೀಕ್ಷೆಯಿಟ್ಟುಕೊಂಡಿಲ್ಲ ಎಂದು ಗ್ರಾಮದವರು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com