ಐಟಿ ಉದ್ಯೋಗಿಗಳಲ್ಲಿ ನಮೋ ಮೇನಿಯಾ: ಮೋದಿ ಮೇಲೆ ಟೆಕ್ಕಿಗಳಿಗೇಕೆ ವ್ಯಾಮೋಹ?

ಪ್ರಧಾನಮಂತ್ರಿ ನರೇಂದ್ರ ಮೋದಿ ಮೇಲೆ ಟೆಕ್ಕಿಗಳಿಗೆ ಹೆಚ್ಚಿನ ವ್ಯಾಮೋಹವೇ? ಈ ಪ್ರಶ್ನೆಗೆ ಉತ್ತರ ಇಲ್ಲ ಎಂಬುದಾಗಿದೆ, ಕೆಲವರು ಮೋದಿ ಅವರನ್ನು ..
ನರೇಂದ್ರ ಮೋದಿ
ನರೇಂದ್ರ ಮೋದಿ
ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಮೇಲೆ ಟೆಕ್ಕಿಗಳಿಗೆ ಹೆಚ್ಚಿನ ವ್ಯಾಮೋಹವೇ? ಈ ಪ್ರಶ್ನೆಗೆ ಉತ್ತರ ಇಲ್ಲ ಎಂಬುದಾಗಿದೆ, ಕೆಲವರು ಮೋದಿ ಅವರನ್ನು ಪ್ರಬಲ ನಾಯಕ ಎಂದು ಒಪ್ಪಿಕೊಂಡಿದ್ದಾರೆ, ಕೆಲವರು ತಮ್ಮದೇ ಆದ ಸಲಹೆ ನೀಡುತ್ತಿದ್ದಾರೆ,
ಇತ್ತೀಚೆಗೆ ನಡೆದ ಕೆಲವು ಘಟನೆಗಳು ಟೆಕ್ಕಿಗಳು ಮೋದಿ ಮೇನಿಯಾದಲ್ಲಿ ಮುಳುಗಿದ್ದಾರೆ ಎಂಬುದನ್ನು ಸಾಬೀತು ಪಡಿಸಿವೆ, ಮೋದಿ ಮೇಲಿನ ಅಭಿಮಾನದಿಂದ ಬೇರೆ ಯಾವ ಪಕ್ಷವು ಅವರ ಗಣನೆಗೆ ಬರುತ್ತಿಲ್ಲ. ಮಾರ್ಚ್ 18 ರಂದು ಮಾನ್ಯತಾ ಟೆಕ್ ಪಾರ್ಕಿ ನಲ್ಲಿ ನಡೆದ ಸಂವಾದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು  ಒಂದು ಗುಂಪು ಸ್ವಾಗತಿಸಿತು. ಜೊತೆಗೆ ಮೋದಿ ಪರ ಘೋಷಣೆ ಕೂಗಿದರು, 
ಈ ಘಟನೆ ಟೆಕ್ಕಿಗಳಿಗೆ ಮೋದಿ ಮೇಲಿನ ಪ್ರೀತಿ ಹಾಗೂ ಅಭಿಮಾನ ತೋರಿಸುತ್ತದೆ, ಅಂದರೆ ವಿದ್ಯಾವಂತರು, ಯುವಕರು ಹೆಚ್ಚಾಗಿ ದೊಡ್ಡ ಪ್ರಮಾಣದಲ್ಲಿ ಮಧ್ಯಮವರ್ಗದ ಜವತೆ ಹಾಗೂ ಸಾಮಾಜಿಕ ಮಾಧ್ಯಮ ಬಳಕೆದಾರರು ಮೋದಿ ಬೆಂಬಲಿಸುತ್ತಾರೆ.
ಐಟಿ ಉದ್ಯೋಗಿಗಳ ದೊಡ್ಡ ಸಮೂಹವೇ ಮೋದಿ ಬೆಂಬಲಿಸುತ್ತಿದೆ, ಅವರು ಬಿಜೆಪಿ ಪಕ್ಷದ ಪರವಾಗಿಲ್ಲ ಆದರೂ ಮೋದಿ ಬೇಕು, ಈ ಬೆಂಬಲ ಮತವಾಗಿ ವರ್ಗಾವಣೆಯಾಗುತ್ತದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಆದರೆ ಈ ಪ್ರಶ್ನೆಗೆ ಉತ್ತರಿಸುವವರು ಯಾರು ಇಲ್ಲ.
ಮೋದಿ ಅಭಿವೃದ್ಧಿ ಮಾಡುತ್ತಾರೆ, ಕಾಂಗ್ರೆಸ್ ಹಗರಣ ಮಾಡುತ್ತದೆ ಎಂಬುದಾಗಿ ನನ್ನ ಕಚೇರಿಯಲ್ಲಿ ಮಾತನಾಡಿಕೊಳ್ಳುತ್ತಾರೆ, ಮೋದಿ ಅವರನ್ನು ಬೆಂಬಲಿಸಿದರೇ ಯುವಕರಿಗೆ ಉಪಯೋಗ ಹೆಚ್ಚು ಎಂಬುದು ಬೆಂಗಳೂರಿನ ಜರ್ಮನಿ ಕಂಪನಿಯಲ್ಲಿರುವ ಐಟಿ ಉದ್ಯೋಗಿ ಭರತ್ ಎಂಬುವರ ಅಭಿಪ್ರಾಯ. ಕೆಟ್ಟದ್ದರಲ್ಲಿ ಒಳ್ಳೆಯದನ್ನು ಆಯ್ಕೆ ಮಾಡಬೇಕಾಗಿದೆ, ಹೀಗಾಗಿ ಮೋದಿ ಗೆ ನಮ್ಮ ಬೆಂಬಲ ಎಂದು ರಮ್ಯ ಎಂಬ ಐಟಿ ಉದ್ಯೋಗಿ.
ನೀಡಿದ್ದ ಭರವಸೆಗಳೆಲ್ಲಾ ಈಡೇರಿಸದೇ ಇರಬಹುದು, ಆದರೆ ಮತ್ತೆ ಅವರು ಅಧಿಕಾರಕ್ಕೆ ಬಂದರೆ ಭಯೋತ್ಪಾದಕರು ಮತ್ತು ನಕ್ಸಲೈಟ್ಸ್ ಅವರನ್ನು ಮಟ್ಟ ಹಾಕುತ್ತಾರೆ ಎಂದು ಹೇಳಿದ್ದಾರೆ.ರಾಹುಲ್ ಗಾಂದಿ ಅವರಿಗೆ ಪರ್ಯಾಯವಲ್ಲ, 
ಸಾಮಾಜಿಕ ಮಾಧ್ಯಮ, ಫೇಸ್ ಬುಕ್, ಟ್ವಿಟ್ಟರ್, ಮತ್ತು ವಾಟ್ಸಾಪ್ ಗಳಲ್ಲಿ ಹೆಚ್ಚಿನ ಮೋದಿ ಬೆಂಬಲಿಗರಿದ್ದಾರೆ. ಕಾರಣವಿಲ್ಲದೇ ಮೋದಿ ಅವರನ್ನು ಬೆಂಬಲಿಸುವ ಮತ್ತೊಂದು ಗುಂಪಿದೆ,  ಅವರಿಗೆ ತಾವು ಏಕೆ ಮೋದಿಯನ್ನು ಬೆಂಬಲಿಸುತ್ತೇವೆ ಎಂಬದನ್ನು ವಿಶ್ಲೇಷಿಸಲು ಸಾಧ್ಯವಿಲ್ಲ ಎಂದು ರಾಜಕೀಯ ವಿಶ್ಲೇಷಕ ಪ್ರೊ. ನಾರಾಯಣ ಹೇಳಿದ್ದಾರೆ.
ಇನ್ನೂ ಹಿಂದಿ ಹಾರ್ಟ್ ಲ್ಯಾಂಡ್ ನಿಂದ ಬಂದಿರುವ ಟೆಕ್ಕಿಗಳು ಹಿಂದಿ ಹೇರಿಕೆ. ಹಿಂದುತ್ವ ಹಾಗೂ ಹಸುವಿನ ಹೆಸರಲ್ಲಿ ರಾಜಕೀಯವನ್ನು ಸುಲಭವಾಗಿ ಒಪ್ಪಿಕೊಂಡು ಮೋದಿ ಬೆಂಬಲಕ್ಕೆ ನಿಂತಿದ್ದಾರೆ, ಮೋದಿ ಬೆಂಬಲಿತ ಕೆಲವು ಗುಂಪಿನಿಂದ ಎಲ್ಲಾ ಟೆಕ್ಕಿಗಳು ಮೋದಿ ಬೆಂಬಲಕ್ಕಿದ್ದಾರೆ ಎಂಬ ಸಂದೇಶ ರವಾನಿಸುತ್ತಿದ್ದಾರೆ, ಆದರೆ ಮೌನವಾಗಿದ್ದಾರೆ ಎಂದರೇ ಮೋದಿ ಅವರನ್ನು ಬೆಂಬಲಿಸುತ್ತಿಲ್ಲ ಎಂದೇ ಅರ್ಥ ಎಂದು ಮತ್ತೊಬ್ಬ ಟೆಕ್ಕಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com