ಕೇಶ ವಿನ್ಯಾಸಗಾರ ಜಾವೇದ್‌ ಹಬೀಬ್‌ ಬಿಜೆಪಿ ಸೇರಿದ್ದೇ ತಡ, ಮೋದಿ, ಅಮಿತ್ ಶಾ, ಯೋಗಿ ಕೇಶ ವಿನ್ಯಾಸ ಸಂಪೂರ್ಣ ಬದಲು!

ಖ್ಯಾತ ಕೇಶ ವಿನ್ಯಾಸಗಾರ ಜಾವೇದ್ ಹಬೀಬ್ ಬಿಜೆಪಿಗೆ ಸೇರ್ಪಡೆಯಾಗಿದ್ದು ಈಗ ಹಳೆಯ ಸುದ್ದಿ. ಹೊಸ ವಿಷಯ ಏನು ಅಂದರೆ, ಹಬೀಬ್ ಬಿಜೆಪಿಗೆ ಸೇರ್ಪಡೆಯಾದ ಬೆನ್ನಲ್ಲೇ ಬಿಜೆಪಿ ನಾಯಕರ ಕೇಶ ವಿನ್ಯಾಸವೇ

Published: 23rd April 2019 12:00 PM  |   Last Updated: 23rd April 2019 06:54 AM   |  A+A-


BJP leaders get spiffy new hair styles on Twitter as salon magnate Jawed Habib joins party

ಕೇಶ ವಿನ್ಯಾಸಗಾರ ಜಾವೇದ್‌ ಹಬೀಬ್‌ ಬಿಜೆಪಿ ಸೇರಿದ್ದೇ ತಡ, ಮೋದಿ, ಅಮಿತ್ ಶಾ, ಯೋಗಿ ಕೇಶ ವಿನ್ಯಾಸ ಸಂಪೂರ್ಣ ಬದಲು!

Posted By : SBV SBV
Source : Online Desk
ನವದೆಹಲಿ: ಖ್ಯಾತ ಕೇಶ ವಿನ್ಯಾಸಗಾರ ಜಾವೇದ್ ಹಬೀಬ್ ಬಿಜೆಪಿಗೆ ಸೇರ್ಪಡೆಯಾಗಿದ್ದು ಈಗ ಹಳೆಯ ಸುದ್ದಿ. ಹೊಸ ವಿಷಯ ಏನು ಅಂದರೆ, ಹಬೀಬ್ ಬಿಜೆಪಿಗೆ ಸೇರ್ಪಡೆಯಾದ ಬೆನ್ನಲ್ಲೇ ಬಿಜೆಪಿ ನಾಯಕರ ಕೇಶ ವಿನ್ಯಾಸವೇ ಸಂಪೂರ್ಣ ಬದಲಾವಣೆಯಾಗಿದೆ. 

ಹಬೀಬ್ ಬಿಜೆಪಿ ಸೇರ್ಪಡೆಯಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಮೋದಿ, ಅಮಿತ್ ಶಾ ಅವರ ಫೋಟೋಗಳನ್ನು ಹೇರ್ ಸ್ಟೈಲ್ ಬದಲಾಗಿರುವ ರೀತಿಯಲ್ಲಿ ಬದಲಾವಣೆ ಮಾಡಿ ಹಾಕಲಾಗುತ್ತಿದೆ.    

ಮೋದಿ, ಅಮಿತ್ ಶಾ ಅಷ್ಟೇ ಅಲ್ಲದೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಫೋಟೋವನ್ನು ಸಹ ಬದಲಾವಣೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಲಾಗುತ್ತಿದೆ. 

ಬಿಜೆಪಿ ಸೇರ್ಪಡೆಗೊಂಡ ಬಳಿಕ ಮಾತನಾಡಿದ್ದ ಹಬೀಬ್, ಈ ವರೆಗೂ ನಾನು ಕೇಶ ವಿನ್ಯಾಸಕ್ಕೆ ಕಾವಲುಗಾರನಾಗಿದ್ದೆ, ಇನ್ನು ಮುಂದೆ ದೇಶಕ್ಕೂ ಕಾವಲುಗಾರನಾಗಿರುತ್ತೇನೆ ಎಂದು ಹೇಳಿದ್ದರು. 
Stay up to date on all the latest ಸ್ವಾರಸ್ಯ news with The Kannadaprabha App. Download now
facebook twitter whatsapp