ಬೆಂಗಳೂರಿಗರೇ ಇವರನ್ನು ನೋಡಿ ಕಲಿಯಿರಿ: ವಿದೇಶದಿಂದ ಬಂದು ಮತದಾನ ಮಾಡಿದ ದಂಪತಿ!

ಬೆಂಗಳೂರಿನಲ್ಲಿದ್ದುಕೊಂಡು ಕೆಲ ದೂರದಲ್ಲಿರುವ ಬೂತ್ ಗಳಿಗೆ ಹೋಗಿ ಮತಚಲಾಯಿಸದ ನಮ್ಮ ನಗರದ ನಾಗರಿಕರು ಈ ದಂಪತಿ ನೋಡಿ ಕಲಿಯುವುದು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಬೆಂಗಳೂರಿನಲ್ಲಿದ್ದುಕೊಂಡು ಕೆಲ ದೂರದಲ್ಲಿರುವ ಬೂತ್ ಗಳಿಗೆ ಹೋಗಿ ಮತಚಲಾಯಿಸದ ನಮ್ಮ ಬೆಂಗಳೂರು ನಾಗರಿಕರು ಈ ದಂಪತಿ ನೋಡಿ ಕಲಿಯುವುದು ಬಹಳಷ್ಟಿದೆ.
ಜೆಕ್ ಗಣರಾಜ್ಯದಿಂದ ಭಾರತಕ್ಕೆ ಬಂದು ಮತ ಚಲಾಯಿಸಿರುವ ಈ ದಂಪತಿ ಮಾದರಿಯಾಗಿದ್ದಾರೆ.
ಜೆಕ್ ಗಣರಾಜ್ಯದಲ್ಲಿ ಕೆಲಸ ಮಾಡುತ್ತಿರುವ ಸೌಮ್ಯ ಮತ್ತು ವಿನೀತ್  ಶಿರಸಿ ಮತ್ತು ಹರಿಹರದಲ್ಲಿ ತಮ್ಮ ಮತ ಚಲಾಯಿಸಿದ್ದಾರೆ.
ಮತ ಚಲಾಯಿಸುವುದು ನಮ್ಮ ಹಕ್ಕು, ಮತದಾನದಿಂದ ನಾವು ಭಾರತೀಯರು ಎಂಬ ಹೆಮ್ಮೆ ಮೂಡುತ್ತದೆ, ಮತ ಹಾಕಿದರೇ ಮಾತ್ರ ನಾವು ಜನ ಪ್ರತಿನಿಧಿಗಳನ್ನು ಪ್ರಶ್ನಿಸಲು ಸಾಧ್ಯ, ಹಣ ಖರ್ಚಾದರೂ ಪರವಾಗಿಲ್ಲ, ಮತ ಹಾಕಬೇಕೆಂದು ಬಂದಿರುವುದಾಗಿ ದಂಪತಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com