ಕಣ್ಣೂರು: ವಿವಿಪ್ಯಾಟ್ ಯಂತ್ರದೊಳಗೆ 'ಬುಸ್ ಬುಸ್ ನಾಗ' ಕೆಲಕಾಲ ಮತದಾನ ಸ್ಥಗಿತ

ಕೇರಳದ ಕಣ್ಣೂರು ಲೋಕಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಅಸಾಮಾನ್ಯ ಅತಿಥಿಯೊಬ್ಬರು ಕಾಣಿಸಿಕೊಂಡಿದ್ದರಿಂದ ಕೆಲಕಾಲ ಮತದಾನವನ್ನು ಸ್ಥಗಿತಗೊಳಿಸಲಾಗಿತ್ತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಣ್ಣೂರು:  ಕೇರಳದ ಕಣ್ಣೂರು ಲೋಕಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಅಸಾಮಾನ್ಯ ಅತಿಥಿಯೊಬ್ಬರು ಕಾಣಿಸಿಕೊಂಡಿದ್ದರಿಂದ ಕೆಲಕಾಲ ಮತದಾನವನ್ನು ಸ್ಥಗಿತಗೊಳಿಸಲಾಗಿತ್ತು.

ಮೇಯಿಲ್ ಕಂದಾಕ್ಕೈ ಮತಗಟ್ಟೆಯ ವಿವಿಪ್ಯಾಟ್ ಯಂತ್ರದೊಳಗೆ ದೊಡ್ಡ ಗಾತ್ರದ ಹಾವೊಂದು ಪ್ರತ್ಯಕ್ಷವಾಗಿದೆ. ಇದರಿಂದಾಗಿ ಮತಗಟ್ಟೆಯಲ್ಲಿದ್ದ ಅಧಿಕಾರಿಗಳು ಹಾಗೂ ಮತದಾರರು ಆತಂಕಕ್ಕೊಳಗಾದರು.

ಆದಾಗ್ಯೂ, ಉರಗ ತಜ್ಞರದಿಂದ ಈ ಹಾವನ್ನು ಹಿಡಿದು , ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು. ಕಣ್ಣೂರು ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಪಿಕೆ ಶ್ರೀಮತಿ ಸಿಪಿಐ- ಎಂ- ಎಲ್ ಡಿಎಫ್ ಅಭ್ಯರ್ಥಿಯಾಗಿದ್ದಾರೆ.
ಕೆ ಸುರೇಂದ್ರನ್ ( ಕಾಂಗ್ರೆಸ್- ಯುಡಿಎಫ್) ಸಿ ಕೆ ಪದ್ಮನಾಭನ್ ( ಬಿಜೆಪಿ- ಎನ್ ಡಿಎ) ಅಭ್ಯರ್ಥಿಯಾಗಿದ್ದು, ತಮ್ಮ ಅದೃಷ್ಟ ಪರೀಕ್ಷೆಗೆ ಪ್ರಯತ್ನಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಬೆಳಗ್ಗೆಯಿಂದಲೂ ಮತದಾನ ನಡೆಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com