ಮೊದಲು ಬಂದವರಿಗೆ ಆದ್ಯತೆ; ಗದಗ ಜಿಲ್ಲೆಯಲ್ಲೊಂದು 'ಚುನಾವಣೆ ದೇವರು'

ಇತ್ತೀಚಿನ ವರ್ಷಗಳಲ್ಲಿ ಚುನಾವಣೆಗೆ ನಿಲ್ಲುವ ರಾಜಕೀಯ ನಾಯಕರು ಗದಗ ಜಿಲ್ಲೆಯ ಗ್ರಾಮವೊಂದರಲ್ಲಿರುವ ...

Published: 24th March 2019 12:00 PM  |   Last Updated: 24th March 2019 02:32 AM   |  A+A-


Representational image

ಸಾಂದರ್ಭಿಕ ಚಿತ್ರ

Posted By : SUD SUD
Source : The New Indian Express
ಗದಗ: ಚುನಾವಣೆಗೆ ನಿಲ್ಲುವ ರಾಜಕೀಯ ನಾಯಕರಿಗೆ ಇದು ವಿಶೇಷ ಕ್ಷೇತ್ರ. ಗದಗ ಜಿಲ್ಲೆಯ ಗ್ರಾಮವೊಂದರಲ್ಲಿರುವ ಶಿವ ದೇವಸ್ಥಾನ ಅವರಿಗೆ ಶ್ರೀರಕ್ಷೆ. ದೇವಸ್ಥಾನಕ್ಕೆ ಭೇಟಿ ನೀಡುವ ಅಭ್ಯರ್ಥಿಗಳಿಗೆ ಈ ದೇವರ ಆಶೀರ್ವಾದ ಸಿಕ್ಕಿದರೆ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂಬ ನಂಬಿಕೆಯಿದೆ ಹಿಂದಿನಿಂದಲೂ. ಹೀಗಾಗಿ ಈ ಶಿವದೇವರನ್ನು ಚುನಾವಣೆಯ ದೇವರು ಎಂದು ಸುತ್ತಮುತ್ತಲ ಜನರು ಕರೆಯುತ್ತಾರೆ.

ಗದಗ ಜಿಲ್ಲೆಯ ಗಜೇಂದ್ರಗಢದಿಂದ 12 ಕಿಲೋ ಮೀಟರ್ ದೂರದಲ್ಲಿ ಮ್ಯಾಕಲ್ಜೇರಿ ಗ್ರಾಮದಲ್ಲಿ ಈ ದೇವಸ್ಥಾನವಿದ್ದು ಗ್ರಾಮಸ್ಥರಿಗೆ ಮತ್ತು ಪ್ರತಿಸ್ಪರ್ಧಿಗಳಿಗೆ ಗೊತ್ತಾಗದಂತೆ ಚುನಾವಣೆಗೆ ನಿಂತವರು ದೇವಸ್ಥಾನಕ್ಕೆ ಭೇಟಿ ನೀಡಬೇಕು. ದೇವಸ್ಥಾನಕ್ಕೆ ಮೊದಲ ಬಾರಿಗೆ ಬಂದು ಪ್ರಾರ್ಥನೆ ಸಲ್ಲಿಸಿದ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂಬ ನಂಬಿಕೆ.
ಕಳೆದ 5 ದಶಕಗಳಿಂದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ದೇವಸ್ಥಾನಕ್ಕೆ ಭೇಟಿ ನೀಡಿ ಗೆಲುವಿಗೆ ಪ್ರಾರ್ಥಿಸುತ್ತಾರೆ.

ಗದಗ ಜಿಲ್ಲೆಯ ಈಶಾನ್ಯ ಭಾಗದಲ್ಲಿ ಈ ದೇವಸ್ಥಾನ ಇರುವುದರಿಂದ ಶಿವನ ದೇವಸ್ಥಾನವಾಗಿರುವುದರಿಂದ ಇದು ಅತ್ಯಂತ ಪ್ರಶಸ್ತನೀಯ ಎಂಬ ನಂಬಿಕೆಯಿದೆ. ಇಲ್ಲಿ ಪೂಜೆ ಸಲ್ಲಿಸಿದ ನಂತರ ಅಭ್ಯರ್ಥಿಗಳು ಪ್ರಚಾರ ಆರಂಭಿಸುತ್ತಾರೆ. ದೇವರ ಆಶೀರ್ವಾದ ಸಿಗಲು ಮೊದಲು ರಾಜಕೀಯ ನಾಯಕರಿಗೆ ಟಿಕೆಟ್ ಸಿಗಬೇಕು. 2008ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಜಯ ಗಳಿಸಿದ್ದ ಬಿಜೆಪಿ ನಾಯಕ ರೊಣ ಕಾಳಕಪ್ಪ ಬಂಡಿ ಈ ದೇವಾಲಯದ ದರ್ಶನ ಪಡೆದಿದ್ದರು. ಇದೇ ಕ್ಷೇತ್ರದಲ್ಲಿ 2013ರಲ್ಲಿ ಕಾಂಗ್ರೆಸ್ ನಾಯಕ ಜಿ ಎಸ್ ಪಾಟೀಲ್ ಚುನಾವಣೆ ಪ್ರಚಾರಕ್ಕೆ ಮುನ್ನ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಕಾಳಕಪ್ಪ ವಿರುದ್ಧ ಜಯ ಗಳಿಸಿದ್ದರು.

2014ರಲ್ಲಿ ಶಿವಕುಮಾರ ಉದಾಸಿ ಸಂಸದ ಸ್ಥಾನಕ್ಕೆ ಸ್ಪರ್ಧಿಸುವ ಸಂದರ್ಭದಲ್ಲಿ ತಮ್ಮ ಪ್ರಚಾರವನ್ನು ಇಲ್ಲಿ ಸ್ಪರ್ಧಿಸಿ ಜಯ ಗಳಿಸಿದ್ದರು. ಯಾರೇ ಇಲ್ಲಿಗೆ ಪೂಜೆ ಸಲ್ಲಿಸಲು ಬಂದರೂ ಕೂಡ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂಬ ಪ್ರತೀತಿಯಿದೆ.

ರಾಜಕೀಯ ನಾಯಕರು ದೇವಸ್ಥಾನಕ್ಕೆ ಬರುವಾಗ ಸುದ್ದಿಯಾಗಬಾರದು ಎಂಬ ಪ್ರತೀತಿಯಿದೆ ಎನ್ನುತ್ತಾರೆ ಇಲ್ಲಿನ ನಿವಾಸಿ ಕಾಕಳೇಶ ನೀರಲಗಿ. ರಾಜಕೀಯ ನಾಯಕರು ಇಲ್ಲಿಗೆ ಗುಟ್ಟಾಗಿ ಬಂದು ಪೂಜೆ ಸಲ್ಲಿಸಿ ಹೋಗಬೇಕು, ಯಾವುದೇ ಫೋಟೋ ತೆಗೆಯುವುದು, ಸೋಷಿಯಲ್ ಮೀಡಿಯಾದಲ್ಲಿ ಹಾಕುವುದು ಮಾಡಬಾರದು. ಹಲವು ದಶಕಗಳಿಂದ ರಾಜಕೀಯ ನಾಯಕರು ಇಲ್ಲಿಗೆ ಬರುತ್ತಿರುತ್ತಾರೆ ಎನ್ನುತ್ತಾರೆ ಕಾಕಳೇಶ.
Stay up to date on all the latest ಸ್ವಾರಸ್ಯ news with The Kannadaprabha App. Download now
facebook twitter whatsapp