ಸಂಸದ ಲಕ್ಷ್ಮೀ ನಾರಾಯಣ್ ಯಾದವ್
ಸಂಸದ ಲಕ್ಷ್ಮೀ ನಾರಾಯಣ್ ಯಾದವ್

2014ರಲ್ಲಿ 73 ವರ್ಷ, 2019ರಲ್ಲಿ 74 ವರ್ಷ..!; ಬಿಜೆಪಿ 'ಹಿರಿತನದ ನಿಯಮ'ಕ್ಕೆ ಬೆಚ್ಚಿದರೇ ಸಂಸದ?

ಮದ್ಯ ಪ್ರದೇಶದ ಬಿಜೆಪಿ ಸಂಸದರೊಬ್ಬರು ತಮ್ಮ ವಯಸ್ಸಿನ ವಿಚಾರವಾಗಿ ಸುದ್ದಿಗೆ ಗ್ರಾಸವಾಗಿದ್ದು, 2014ರಲ್ಲಿ ತಮ್ಮ ವಯಸ್ಸು 73 ವರ್ಷ ಎಂದು ಹೇಳಿಕೊಂಡಿದ್ದವರು, ಇದೀಗ 2019ರಲ್ಲಿ ತಮಗೆ 74 ವರ್ಷ ವಯಸ್ಸು ಎಂದು ಹೇಳಿಕೊಂಡಿದ್ದಾರೆ.
ಭೋಪಾಲ್: ಮದ್ಯ ಪ್ರದೇಶದ ಬಿಜೆಪಿ ಸಂಸದರೊಬ್ಬರು ತಮ್ಮ ವಯಸ್ಸಿನ ವಿಚಾರವಾಗಿ ಸುದ್ದಿಗೆ ಗ್ರಾಸವಾಗಿದ್ದು, 2014ರಲ್ಲಿ ತಮ್ಮ ವಯಸ್ಸು 73 ವರ್ಷ ಎಂದು ಹೇಳಿಕೊಂಡಿದ್ದವರು, ಇದೀಗ 2019ರಲ್ಲಿ ತಮಗೆ 74 ವರ್ಷ ವಯಸ್ಸು ಎಂದು ಹೇಳಿಕೊಂಡಿದ್ದಾರೆ.
ಹೌದು ಮಧ್ಯ ಪ್ರದೇಶದ ಸಾಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ  ಲಕ್ಷ್ಮೀ ನಾರಾಯಣ್ ಯಾದವ್ ಅವರು ಇಂತಹುದೊಂದು ವಿವಾದಕ್ಕೆ ಸಿಲುಕಿದ್ದಾರೆ. 2014ರ ಲೋಕಸಭಾ ಚುನಾವಣೆ ವೇಳೆ ಇವರು ತಮಗೆ 73 ವರ್ಷ ವಯಸ್ಸು ಎಂದು ಹೇಳಿಕೊಂಡಿದ್ದರು. ಅಂತೆಯೇ 2019ರಲ್ಲೂ ಇದೇ ಸಾಗರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಅವರು ತಮಗೆ 74 ವರ್ಷ ವಯಸ್ಸು ಎಂದು ಹೇಳಿಕೊಂಡಿದ್ದಾರೆ. 
ಅರೆ ಇದು ಹೇಗೆ ಸಾಧ್ಯ.. ಅವರೇನಾದರೂ ಲೀಪ್ ಇಯರ್ ನಲ್ಲಿ ಜನಿಸಿರಬಹುದೇ ಎಂಬುದು ನಿಮ್ಮ ಪ್ರಶ್ನೆಯಾದರೆ ಉತ್ತರ... ಅಲ್ಲ.. ಈ ಗೊಂದಲದ ಪ್ರಶ್ನೆಗಳ ಕುರಿತು ಅವರನ್ನೇ ವಿಚಾರಿಸಿದಾಗ ಮಾತನಾಡಿದ ಅವರು, ನನಗೀಗ 74 ವರ್ಷ. ನಾನು 1944ರ ನವೆಂಬರ್ 9ರಂದು ಜನಿಸಿದ್ದೆ ಎಂದು ಹೇಳಿದ್ದಾರೆ.
ಇನ್ನು ವಯಸ್ಸಿನ ವಿವಾದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನನಗೀಗ 74 ವರ್ಷ ವಯಸ್ಸು. ಕಳೆದ ಬಾರಿ ಲೋಕಸಭಾ ಚುನಾವಣೆ ವೇಳೆ ನಾನು ಏನು ಮಾಹಿತಿ ನೀಡಿದ್ದೆನೋ ತಿಳಿದಿಲ್ಲ ಎಂದು ಹೇಳಿದ್ದಾರೆ. ಇನ್ನು ಲಕ್ಷ್ಮೀ ನಾರಾಯಣ ಯಾದವ್ ಅವರ ವಯಸ್ಸಿನ ವಿಚಾರವನ್ನು ವ್ಯಾಪಕ ಟ್ರೋಲ್ ಮಾಡಲಾಗುತ್ತಿದ್ದು, ಕೆಲವರು ಯಾದವ್ ಅವರ ಬಿಜೆಪಿಯ 75 ವರ್ಷ ದಾಟಿದ ಹಿರಿಯರಿಗೆ ಟಿಕೆಟ್ ಇಲ್ಲ ಎಂಬ ನಿಯಮದಿಂದ ಬೆಚ್ಚಿ ಬಿದ್ದಿದ್ದು, ಇದೇ ಕಾರಣಕ್ಕೆ ತನ್ನ ನಿಜವಾದ ವಯಸ್ಸನ್ನು ಮರೆಮಾಚುತ್ತಿದ್ದಾರೆ ಎಂದು ಕಾಲೆಳೆದಿದ್ದಾರೆ.
ಇನ್ನು ಬಿಜೆಪಿ ಪಕ್ಷಕೂಡ ಪಕ್ಷದ ಹಿರಿಯ ಮುಖಂಡರಾದ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿಯಂತಹವರಿಗೆ ಈ ಬಾರಿ ಚುನವಾಣೆಯಲ್ಲಿ ಟೀಕೆಟ್ ನೀಡರಿಲ್ಲ. ಇದೇ ಕಾರಣಕ್ಕೆ ಪಕ್ಷದ ಹಲವು ಹಿರಿಯ ಮುಖಂಡರು ತಮ್ಮ ವಯಸ್ಸು ಮರೆ ಮಾಚುತ್ತಿದ್ದಾರೆ ಎಂದು ವ್ಯಂಗ್ಯ ಮಾಡಲಾಗುತ್ತಿದೆ.

Related Stories

No stories found.

Advertisement

X
Kannada Prabha
www.kannadaprabha.com