ಒಂದೆಡೆ ಬ್ಯಾರಿಕೇಡ್ ದಾಟಿ ಅಭಿಮಾನಿಗಳ, ಮತ್ತೊಂದೆಡೆ ಮೋದಿ ಭಕ್ತರ ಕೈ ಕುಲುಕಿದ ಪ್ರಿಯಾಂಕಾ!

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಚುನಾವಣಾ ಪ್ರಚಾರಕ್ಕೆ ಹೋದಲ್ಲಿ ...

Published: 14th May 2019 12:00 PM  |   Last Updated: 14th May 2019 02:22 AM   |  A+A-


Priyanka Gandhi Vadra jumps barricade

ಬ್ಯಾರಿಕೇಡ್ ಹತ್ತಿದ ಪ್ರಿಯಾಂಕಾ ಗಾಂಧಿ ವಾದ್ರಾ

Posted By : SUD SUD
Source : Online Desk
ನವದೆಹಲಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸ್ಟಾರ್ ಪ್ರಚಾರಕಿ ಪ್ರಿಯಾಂಕಾ ಗಾಂಧಿ ವಾದ್ರಾ ಚುನಾವಣಾ ಪ್ರಚಾರಕ್ಕೆ ಹೋದಲ್ಲಿ ಸುದ್ದಿಯಾಗುತ್ತಾರೆ.

ನಿನ್ನೆ ಮಧ್ಯಪ್ರದೇಶದ ರಾಟ್ಲಮ್ ಎಂಬಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಭಾಷಣ ಮಾಡಿದ್ದ ಪ್ರಿಯಾಂಕಾ ಗಾಂಧಿ ’ಕೇಂದ್ರ ಸರ್ಕಾರದ ಅಹಂಕಾರ ಹೆಚ್ಚಿದೆ' ಎನ್ನುವ ಮೂಲಕ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.

ಸಮಾವೇಶ ಮುಗಿದ ಬಳಿಕ ವೇದಿಕೆ ಇಳಿದು ಬರುತ್ತಿರುವಾಗ ಜನರು ಪ್ರಿಯಾಂಕಾ, ಪ್ರಿಯಾಂಕಾ ಎಂದು ಕೂಗುತ್ತಿದ್ದಾಗ ಅಲ್ಲಿ ಹಾಕಲಾಗಿದ್ದ ಸುಮಾರು ಮೂರೂವರೆ ಅಡಿ ಎತ್ತರದ ಬ್ಯಾರೀಕೇಡ್ ದಾಟಿ ಬಂದು ಬೆಂಬಲಿಗರ ಹತ್ತಿರ ಹೋಗಿ ಕೈಕುಲುಕಿದರು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೋಡುಗರನ್ನು ಅಚ್ಚರಿಗೀಡು ಮಾಡಿದೆ.

ಇನ್ನೊಂದೆಡೆ ಕಾರಿನಲ್ಲಿ ಬೆಂಗಾವಲು ವಾಹನದೊಂದಿಗೆ ಪ್ರಿಯಾಂಕಾ ಬರುತ್ತಿದ್ದಾಗ ಮಾರ್ಗದ ಬದಿ ಮೋದಿ ಮೋದಿ ಎಂದು ಜನರು ಕೂಗಿಕೊಳ್ಳುತ್ತಿದ್ದರು. ಆಗ ಕಾರಿನಿಂದಿಳಿದ ಪ್ರಿಯಾಂಕಾ ಸೀದಾ ಮೋದಿಯ ಭಕ್ತರ ಬಳಿಗೆ ತೆರಳಿ ಅವರ ಕೈ ಕುಲುಕಿ ನಗುತ್ತಾ ಆಲ್ ದ ಬೆಸ್ಟ್ ಎಂದಿದ್ದಾರೆ.

ಇದನ್ನು ಇಂಡಿಯನ್ ಯೂತ್ ಕಾಂಗ್ರೆಸ್ ತನ್ನ ಪೇಜ್ ನಲ್ಲಿ ಷೇರ್ ಮಾಡಿದೆ. ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಈ ಎರಡೂ ವಿಡಿಯೊಗಳು ಟ್ರೆಂಡಿಂಗ್ ನಲ್ಲಿದ್ದು ನೋಡುಗರ ಗಮನ ಸೆಳೆದಿವೆ. ಆದರೆ ಇವರ ಭದ್ರತೆಗೆ ಇರುವ ಸಿಬ್ಬಂದಿಗೆ ಮಾತ್ರ ಇಂತಹ ಸಂದರ್ಭಗಳಲ್ಲಿ ಪರಿಸ್ಥಿತಿ ನಿಭಾಯಿಸುವುದು ಕಷ್ಟವೆನಿಸಿದೆ.
Stay up to date on all the latest ಸ್ವಾರಸ್ಯ news with The Kannadaprabha App. Download now
facebook twitter whatsapp