ಎಸ್‌ಪಿ ಮಹಿಳಾ ಅಭ್ಯರ್ಥಿಗಳೇ ಅತಿ ಸಿರಿವಂತರು: ಎಡಿಆರ್

ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ 716 ಮಹಿಳಾ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದು , ಇವರ ಪೈಕಿ ಶೇಕಡ 36 ರಷ್ಟು ಅಭ್ಯರ್ಥಿಗಳು ಅಂದರೆ 225 ಮಹಿಳಾ ಅಭ್ಯರ್ಥಿಗಳ ಆಸ್ತಿ ಒಂದು ಕೋಟಿ ರೂಪಾಯಿಗೂ ಅಧಿಕವಾಗಿದೆ
ಎಸ್‌ಪಿ ಮಹಿಳಾ ಅಭ್ಯರ್ಥಿಗಳೇ ಅತಿ ಸಿರಿವಂತರು: ಎಡಿಆರ್
ಎಸ್‌ಪಿ ಮಹಿಳಾ ಅಭ್ಯರ್ಥಿಗಳೇ ಅತಿ ಸಿರಿವಂತರು: ಎಡಿಆರ್
ಕೋಲ್ಕತ್ತಾ: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ 716 ಮಹಿಳಾ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದು , ಇವರ ಪೈಕಿ ಶೇಕಡ 36 ರಷ್ಟು ಅಭ್ಯರ್ಥಿಗಳು ಅಂದರೆ 225 ಮಹಿಳಾ ಅಭ್ಯರ್ಥಿಗಳ ಆಸ್ತಿ ಒಂದು ಕೋಟಿ ರೂಪಾಯಿಗೂ ಅಧಿಕವಾಗಿದೆ ಎಂದು ಪ್ರಜಾಪ್ರಭುತ್ವ ಸುಧಾರಣಾ ಸಂಸ್ಥೆ (ಅಸೋಸಿಯೇಷನ್ ಆಫ್ ಡೆಮಾಕ್ರೆಟಿಕ್ ರಿಫಾರ್ಮ್ಸ್ – ಎಡಿಆರ್) ಸಂಸ್ಥೆ ವರದಿ ನೀಡಿದೆ.
ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗೆ ಹೋಲಿಕೆ ಮಾಡಿದರೆ ಸಮಾಜವಾದಿ ಪಕ್ಷದ ಮಹಿಳಾ ಅಭ್ಯರ್ಥಿಗಳೇ ಹೆಚ್ಚು ಶ್ರೀಮಂತ ಅಭ್ಯರ್ಥಿಗಳು ಎಂಬುದು ವಿಶೇಷ.
ಈ ಕುರಿತಂತೆ ಎಡಿಆರ್ ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ 724 ಅಭ್ಯರ್ಥಿಗಳ ಪೈಕಿ 716 ಅಭ್ಯರ್ಥಿಗಳ ಸ್ವಯಂ ಘೋಷಿತ ಅಫಿಡವಿಟ್ ಪರಿಶೀಲಿಸಿ ಈ ವಿಷಯ ತಿಳಿಸಿದೆ. 
ಅಫಿಡವಿಟ್ ಹಾಗೂ ಇತರ ದಾಖಲೆಗಳು ಲಭ್ಯವಿಲ್ಲದ ಕಾರಣ ಇತರ 8 ಅಭ್ಯರ್ಥಿಗಳ ಆಸ್ತಿ ಪಾಸ್ತಿ ವಿವರವನ್ನು ಅಂದಾಜು ಮಾಡಲು ಸಾಧ್ಯವಾಗಿಲ್ಲ ಎಂದು ಸಂಸ್ಥೆ ಹೇಳಿಕೊಂಡಿದೆ. 
716 ಅಭ್ಯರ್ಥಿಗಳ ಪೈಕಿ 255 (ಶೇ 36 ರಷ್ಟು) ಅಭ್ಯರ್ಥಿಗಳು ಕೋಟ್ಯಧಿಪತಿಗಳಾಗಿದ್ದಾರೆ. 2014 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 665 ಮಹಿಳಾ ಅಭ್ಯರ್ಥಿಗಳ ಪೈಕಿ 219 (ಶೇ 33 ರಷ್ಟು) ಅಭ್ಯರ್ಥಿಗಳು ಕೋಟ್ಯಧಿಪತಿಗಳು.
ಒಟ್ಟಾರೆ 2019ರ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವ ಮಹಿಳಾ ಅಭ್ಯರ್ಥಿಗಳ ಸರಾಸರಿ ಆಸ್ತಿ 5.63 ಕೋಟಿ ರೂ ನಷ್ಟಿದೆ. 2014 ರಲ್ಲಿ ಈ ಪ್ರಮಾಣ 10.62 ಕೋಟಿ ರೂ ನಷ್ಟಿತ್ತು ಎಂದು ವರದಿ ತಿಳಿಸಿದೆ.
53 ಬಿಜೆಪಿ ಮಹಿಳಾ ಅಭ್ಯರ್ಥಿಗಳ ಸರಾಸರಿ ಆಸ್ತಿ 22.09 ಕೋಟಿ ರೂ, 54 ಕಾಂಗ್ರೆಸ್ ಅಭ್ಯರ್ಥಿಗಳ ಸರಾಸರಿ ಆಸ್ತಿ 18.84 ಕೋಟಿ, 24 ಬಿಎಸ್‌ಪಿ ಮಹಿಳಾ ಅಭ್ಯರ್ಥಿಗಳ ಸರಾಸರಿ ಆಸ್ತಿ 3.03 ಕೋಟಿ ರೂ, 23 ಎಐಟಿಸಿ ಮಹಿಳಾ ಅಭ್ಯರ್ಥಿಗಳ ಸರಾಸರಿ ಆಸ್ತಿ 2.67 ಕೋಟಿ ರೂ, 10 ಸಿಪಿಐ (ಎಂ) ಮಹಿಳಾ ಅಭ್ಯರ್ಥಿಗಳ ಸರಾಸರಿ ಆಸ್ತಿ 1.33 ಕೋಟಿ ರೂ, 6 ಎಸ್ ಪಿ ಮಹಿಳಾ ಅಭ್ಯರ್ಥಿಗಳ ಸರಾಸರಿ ಆಸ್ತಿ 39.85 ಕೋಟಿ ರೂ, ಮೂವರು ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಸರಾಸರಿ ಮೌಲ್ಯ 2.92 ಕೋಟಿ ರೂ ಮತ್ತು 222 ಸ್ವತಂತ್ರ ಅಭ್ಯರ್ಥಿಗಳ ಸರಾಸರಿ ಆಸ್ತಿ 1.63 ಕೋಟಿ ರೂ ನಷ್ಟಿದೆ. ಎಂಟು ಮಹಿಳಾ ಅಭ್ಯರ್ಥಿಗಳ ಶೂನ್ಯ ಆಸ್ತಿ ಘೋಷಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com