ಬಿಜೆಪಿ ಬೆಂಬಲಿಗರೊಂದಿಗೆ 'ಹರ ಹರ ಮೋದಿ' ಎಂದು ಉದ್ಘರಿಸಿದ ಪ್ರಧಾನಿ ಮೋದಿ ತಾಯಿ!

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕೂಡ ಬಿಜೆಪಿ ನೇತೃತ್ವದ ಎನ್ ಡಿಎ ಗೆಲುವಿನತ್ತ ...

Published: 23rd May 2019 12:00 PM  |   Last Updated: 23rd May 2019 01:11 AM   |  A+A-


PM mother Hiraben with Hiraben

ಬಿಜೆಪಿ ಕಾರ್ಯಕರ್ತರೊಂದಿಗೆ ಪ್ರಧಾನಿ ಮೋದಿ ತಾಯಿ ಹೀರಾಬೆನ್

Posted By : SUD SUD
Source : ANI
ಗಾಂಧಿನಗರ(ಗುಜರಾತ್):ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕೂಡ ಬಿಜೆಪಿ ನೇತೃತ್ವದ ಎನ್ ಡಿಎ ಗೆಲುವಿನತ್ತ ಹೆಜ್ಜೆ ಹಾಕುತ್ತಿರುವ ಸಂದರ್ಭದಲ್ಲಿ  ಇತ್ತ ನರೇಂದ್ರ ಮೋದಿಯವರ ತಾಯಿ 98 ವರ್ಷದ ಹೀರಾಬೆನ್ ಗುಜರಾತ್ ನ ಗಾಂಧಿನಗರ ಸಮೀಪ ರೈಸಿನ್ ಗ್ರಾಮದ ತಮ್ಮ ಮನೆಯಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ತಮ್ಮದೇ ಆದ ರೀತಿಯಲ್ಲಿ ಸಂಭ್ರಮಾಚರಿಸುತ್ತಿದ್ದಾರೆ.

ಬಿಜೆಪಿ ಬೆಂಬಲಿತ ಕಾರ್ಯಕರ್ತರ ಜೊತೆ ಸೇರಿ ಹರ ಹರ ಮೋದಿ, ಜೈ ಜೈ ಮೋದಿ ಮತ್ತು ವಂದೇ ಮಾತರಂ ಎಂದು ಘೋಷಣೆ ಕೂಗಿದರು.

ಗ್ರಾಮಸ್ಥರ ಬಾಯಲ್ಲಿ ಹೀರಾಬಾ ಎಂದು ಕರೆಸಿಕೊಳ್ಳುವ ಹೀರಾಬೆನ್ ಅಜ್ಜಿ ತಮ್ಮ ಕಿರಿಯ ಪುತ್ರ ಪಂಕಜ್ ಮೋದಿ ಜೊತೆ ನೆಲೆಸಿದ್ದಾರೆ. ಕಳೆದ ತಿಂಗಳು ಏಪ್ರಿಲ್ 23ರಂದು ಮತ ಚಲಾಯಿಸಿದ್ದ ಹೀರಾಬೆನ್ ಮೋದಿ ಸಾಹೆಬರು ದೇಶಕ್ಕಾಗಿ ಬಹಳ ಮಾಡಿದ್ದಾರೆ. ಇನ್ನೂ ಹೆಚ್ಚಿನದನ್ನು ಮಾಡುತ್ತಾರೆ ಎಂದಿದ್ದರು.

ಮತಗಟ್ಟೆಗೆ ಮತ ಚಲಾಯಿಸಲು ತೆರಳುವ ಮುನ್ನ ಪ್ರಧಾನಿ ಮೋದಿ ತಾಯಿಯ ಬಳಿ ಹೋಗಿ ಆಶೀರ್ವಾದ ಪಡೆದಿದ್ದರು. ಅವರಿಗೆ ತಾಯಿ ಶಾಲು, ತೆಂಗಿನಕಾಯಿ ಮತ್ತು ಸಿಹಿತಿಂಡಿ ನೀಡಿ ಕಳುಹಿಸಿಕೊಟ್ಟಿದ್ದರು.

ಈ ಬಾರಿ ಪ್ರಧಾನಿ ಮೋದಿ ನೇತೃತ್ವದ ಎನ್ ಡಿಎ ಕಳೆದ ಬಾರಿಗಿಂತ ಭಾರೀ ಅಂತರದಲ್ಲಿ ಗೆಲ್ಲುವ ನಿರೀಕ್ಷೆಯಿದೆ. ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದ ರಾಜಸ್ತಾನ ಮತ್ತು ಮಧ್ಯ ಪ್ರದೇಶಗಳಲ್ಲಿ ಸಹ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕಳಪೆ ಸಾಧನೆ ಮಾಡಿದೆ.
Stay up to date on all the latest ಸ್ವಾರಸ್ಯ news with The Kannadaprabha App. Download now
facebook twitter whatsapp