ಬಿಹಾರ:ಲಾಲು - ರಾಬ್ರಿ ಮೋರ್ಚಾ ಸ್ಥಾಪಿಸಿದ ತೇಜ್ ಪ್ರತಾಪ್, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ

ಮಾಜಿ ಬಿಹಾರ ಆರೋಗ್ಯ ಸಚಿವ ತೇಜ್ ಪ್ರತಾಪ್ ಯಾದವ್ ಈಗಾಗಲೇ ಲಾಲು- ರಾಬ್ರಿ ಮೋರ್ಚಾ ಸ್ಥಾಪಿಸಿದ್ದು, ಸರಣ್ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿದ್ದಾರೆ.
ತೇಜ್  ಪ್ರತಾಪ್
ತೇಜ್ ಪ್ರತಾಪ್

ಪಾಟ್ನಾ: ಆರ್ ಜೆಡಿ ವಿದ್ಯಾರ್ಥಿ ಘಟಕದ ಸಂಚಾಲಕ ಹುದ್ದೆಗೆ  ಮೂರು ದಿನಗಳ ಹಿಂದಷ್ಟೇ  ರಾಜೀನಾಮೆ ನೀಡಿದ್ದ ಮಾಜಿ ಬಿಹಾರ ಆರೋಗ್ಯ ಸಚಿವ ತೇಜ್ ಪ್ರತಾಪ್ ಯಾದವ್  ಈಗಾಗಲೇ ಲಾಲು- ರಾಬ್ರಿ ಮೋರ್ಚಾ ಸ್ಥಾಪಿಸಿದ್ದು, ಸರಣ್ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಲೋಕಸಭಾ  ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿದ್ದಾರೆ.

ತಂದೆ ಲಾಲೂ ಪ್ರಸಾದ್ ಯಾದವ್ ಹಾಗೂ ತಾಯಿ ರಾಬ್ರಿ ದೇವಿ ಅವರ ಭದ್ರಕೋಟೆಯಾಗಿದ್ದ ಕಾರಣ ಸರಣ್ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವುಗಾಗಿ  ಜೀ ನ್ಯೂಸ್ ಇಂಡಿಯಾದ ಡಿಎನ್ ಎ ಸಮಾವೇಶದಲ್ಲಿ ತೇಜ್ ಪ್ರತಾಪ್ ಹೇಳಿದರು

ಆದಾಗ್ಯೂ, ಯಾವುದೇ ಹೊಸ ಪಕ್ಷ ಸ್ಥಾಪಿಸುವುದಿಲ್ಲ, ಸರಣ್  ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುವುದಾಗಿ ತೇಜ್ ಪ್ರತಾಪ್ ಹೇಳಿದ್ದಾರೆ.

ಶನಿವಾರ ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡುವಂತೆ ಸಹೋದರ ತೇಜಸ್ವಿ ಯಾದವ್ ಬಳಿ ತೇಜ್ ಪ್ರತಾಪ್ ಕೇಳಿಕೊಂಡಿದ್ದರು. ಯಾರೊ ಕೆಲವರು ತಮ್ಮ ಸಹೋದರಿಗೆ ಕೆಟ್ಟ ಸಲಹೆ ನೀಡುತ್ತಿದ್ದು, ನಮ್ಮಿಬ್ಬರ ನಡುವೆ ಕಲಹಕ್ಕೆ ಪ್ರಯತ್ನಿಸುತ್ತಿದ್ದಾರೆ. ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಎಚ್ಚರಿಕೆ ನೀಡಿದ್ದೇನೆ ಎಂದು ತೇಜ್ ಪ್ರತಾಪ್  ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com