ಐಟಿ ದಾಳಿ: ಡಿಎಂಕೆ ಮುಖಂಡನ ಸಿಮೆಂಟ್ ಗೋಡೌನ್‌ನಲ್ಲಿ 20 ಕೋಟಿ ಗರಿಗರಿ ನೋಟುಗಳು!

ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಡಿಎಂಕೆ ಮುಖಂಡರೊಬ್ಬರಿಗೆ ಸೇರಿದ ಸಿಮೆಂಟ್ ಗೋಡೌನ್‌ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದು ಬರೋಬ್ಬರಿ 20 ಕೋಟಿಗೂ ಅಧಿಕ ಹಣವನ್ನು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಚೆನ್ನೈ: ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಡಿಎಂಕೆ ಮುಖಂಡರೊಬ್ಬರಿಗೆ ಸೇರಿದ ಸಿಮೆಂಟ್ ಗೋಡೌನ್‌ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದು ಬರೋಬ್ಬರಿ 20 ಕೋಟಿಗೂ ಅಧಿಕ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಲೋಕಸಭಾ ಕ್ಷೇತ್ರದ ಡಿಎಂಕೆ ಅಭ್ಯರ್ಥಿಯಾಗಿ ಕ್ಯಾಥೀರ್ ಆನಂದ್ ಸ್ಪರ್ಧಿಸಿದ್ದಾರೆ. ಅವರ ಗೆಲುವಿಗಾಗಿ ಮತದಾರರಿಗೆ ವಿತರಣೆ ಮಾಡಲು ಹಣವನ್ನು ಸಂಗ್ರಹಿಸಿರಬಹುದು ಎಂದು ಐಟಿ ಅಧಿಕಾರಿಗಳು ಶಂಕಿಸಿದ್ದಾರೆ. ಇನ್ನು ಸಿಕ್ಕ ಹಣವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಸಿಮೆಂಟ್ ಗೋಣಿಚೀಲದಲ್ಲಿ, ಬಾಕ್ಸ್ ಒಳಗಡೆ ತುಂಬಿಸಿರುವುದು ಪತ್ತೆಯಾಗಿದೆ. ಇನ್ನು ಪ್ರತಿಯೊಂದು ಬಾಕ್ಸ್ ಮೇಲೆ ತಾಲೂಕಿಗೆ ಇಷ್ಟಿಷ್ಟು ಎಂದು ಹೆಸರನ್ನು ಕೂಡ ಬರೆದು ಪ್ಯಾಕ್ ಮಾಡಿ ಇಟ್ಟಿರುವುದು ಕಂಡು ಬಂದಿದೆ.
ಡಿಎಂಕೆ ಮುಖಂಡ ಮತ್ತು ಪಕ್ಷದ ಖಜಾಂಚಿ ದುರೈ ಮುರುಗನ್ ಅವರ ಪುತ್ರ ಕ್ಯಾಥೀರ್ ಆನಂದ್ ಅವರ ಮನೆ ಮೇಲೆ ಇತ್ತೀಚೆಗಷ್ಟೇ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ 10.50 ಲಕ್ಷ ನಗದು ಹಣವನ್ನು ವಶಪಡಿಸಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com