ಆರ್ಥಿಕತೆಯಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ವಿಫಲ: ಸುಬ್ರಹ್ಮಣಿಯನ್ ಸ್ವಾಮಿ

ಲೋಕಸಭಾ ಚುನಾವಣೆಗೆ 11 ದಿನಗಳಷ್ಟೇ ಬಾಕಿ ಇದ್ದು, ಖಾಸಗಿ ಸುದ್ದಿ ವಾಹಿನಿಯೊಂದು ನಡೆಸಿದ ಚರ್ಚಾ ಕಾರ್ಯಕ್ರಮದಲ್ಲಿ ಸುಬ್ರಹ್ಮಣಿಯನ್ ಸ್ವಾಮಿ ಮಾತನಾಡಿದ್ದಾರೆ.
ಸುಬ್ರಹ್ಮಣಿಯನ್ ಸ್ವಾಮಿ
ಸುಬ್ರಹ್ಮಣಿಯನ್ ಸ್ವಾಮಿ
ನವದೆಹಲಿ: ಲೋಕಸಭಾ ಚುನಾವಣೆಗೆ 11 ದಿನಗಳಷ್ಟೇ ಬಾಕಿ ಇದ್ದು, ಖಾಸಗಿ ಸುದ್ದಿ ವಾಹಿನಿಯೊಂದು ನಡೆಸಿದ ಚರ್ಚಾ ಕಾರ್ಯಕ್ರಮದಲ್ಲಿ ಸುಬ್ರಹ್ಮಣಿಯನ್ ಸ್ವಾಮಿ ಮಾತನಾಡಿದ್ದಾರೆ. ಇದೇ ಚರ್ಚಾ ಕಾರ್ಯಕ್ರಮದಲ್ಲಿ ರಾಮಮಂದಿರ, ಪ್ರಿಯಾಂಕ ಗಾಂಧಿ ರಾಜಕೀಯ ಪ್ರವೇಶದ ಬಗ್ಗೆಯೂ ಸುಬ್ರಹ್ಮಣಿಯನ್ ಸ್ವಾಮಿ ಮಾತನಾಡಿದ್ದಾರೆ. ಅಯೋಧ್ಯೆ ವಿವಾದ ಮಾತುಕತೆ ಮೂಲಕ ಬಗೆಹರಿಯುವುದಕ್ಕೆ ಸಾಧ್ಯವಿಲ್ಲ. ಬಾಬ್ರಿ ಮಸೀದಿ ಇದ್ದ ಸ್ಥಳದಲ್ಲಿ ರಾಮನ ಜನ್ಮ ಸ್ಥಾನ ಇತ್ತು ಎಂಬುದು ಹಿಂದೂಗಳ ನಂಬಿಕೆ, ಇದು ನಂಬಿಕೆಯ ಪ್ರಶ್ನೆ, ಅದು ರಾಮ ಜನ್ಮಭೂಮಿಯಾದ ಕಾರಣ ಹಿಂದೂಗಳು ಅದನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. 
ಆ ಸ್ಥಳವನ್ನು ಮುಸ್ಲಿಮರು ಬಿಟ್ಟುಕೊಡಬೇಕಷ್ಟೇ ಎಂದು ಸ್ವಾಮಿ ಹೇಳಿದ್ದಾರೆ. ಇದೇ ವೇಳೆ ಪ್ರಿಯಾಂಕ ಗಾಂಧಿ ರಾಜಕೀಯ ಪ್ರವೇಶದ ಬಗ್ಗೆಯೂ ಮಾತನಾಡಿರುವ ಸುಬ್ರಹ್ಮಣಿಯನ್ ಸ್ವಾಮಿ, ಪ್ರಿಯಾಂಕ ರಾಜಕೀಯ ಪ್ರವೇಶದಿಂದ ಚುನಾವಣೆ ಮೇಲೆ ಯಾವುದೇ ಪ್ರಭಾವ ಇರುವುದಿಲ್ಲ.  ಕಾಂಗ್ರೆಸ್ ನ ಎನ್ ಐಎ ವೈ ಯೋಜನೆ ಅರುಣ್ ಜೇಟ್ಲಿಯ ಮಾದರಿಯ ಮತ್ತೊಂದು ಯೋಜನೆಯಷ್ಟೇ ಅದಕ್ಕೆ ನಿರ್ದಿಷ್ಟ ಲೆಕ್ಕಾಚಾರವಿಲ್ಲ ಎಂದು ಹೇಳಿದ್ದಾರೆ. ಇನ್ನು ಇದೇ ವೇಳೆ ತಾನು ಚೌಕೀದಾರ್ ಆಗಲು ಸಾಧ್ಯವಿಲ್ಲ ಎಂದು ಸುಬ್ರಹ್ಮಣಿಯನ್ ಸ್ವಾಮಿ ಹೇಳಿದ್ದಾರೆ. 
ನಾನು ಚಿಂತಕ, ಕ್ರಿಮಿನಲ್ ಗಳನ್ನು ಶಿಕ್ಷಿಸುವುದು ಹೇಗೆ ಎಂದು ಯೋಚನೆ ಮಾಡುವ ಚಿಂತಕ ರಾಬರ್ಟ್ ವಾದ್ರ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಜಾಮೀನಿನ ಮೇಲೆ ಹೊರಗೆ ಇದ್ದಾರೆ ಶೀಘ್ರವೇ ಬಂಧನಕ್ಕೊಳಗಾಗುತ್ತಾರೆ.  ರಾಹುಲ್ ಗಾಂಧಿ ಬಳಿ 4 ಪಾಸ್ಪೋರ್ಟ್ ಗಳಿವೆ. ಆತನ ಹೆಸರು ರಾಲ್ ವಿನ್ಸಿ  ಎಂದು ಹೇಳಿದ್ದಾರೆ. ಇದೇ ವೇಳೆ ಅರುಣ್ ಜೇಟ್ಲಿ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿರುವ ಸುಬ್ರಹ್ಮಣಿಯನ್ ಸ್ವಾಮಿ, ಆರ್ಥಿಕ ವಿಷಯಗಳಲ್ಲಿ ಜೇಟ್ಲಿ ವಿಫಲರಾಗಿದ್ದಾರೆ. ನಾನು ಆರ್ಥ ನೀತಿಗಳನ್ನು ಹೇಗೆ ಸರಿಪಡಿಸಬೇಕೆಂಬುದನ್ನು ವಿವರಿಸುತ್ತೇನೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com