ಕಾಂಗ್ರೆಸ್ ಪ್ರಣಾಳಿಕೆ ಅಪಾಯಕಾರಿ, ಜಾರಿ ಸಾಧ್ಯವಿಲ್ಲ: ಸಚಿವ ಅರುಣ್ ಜೇಟ್ಲಿ

2019ರ ಸಾರ್ವತ್ರಿಕ ಚುನಾವಣೆಗೆ ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆಯನ್ನು ಅಪಾಯಕಾರಿ ಪ್ರಣಾಳಿಕೆ ಎಂದು ಬಿಜೆಪಿ ಹೇಳಿದೆ.
ಕಾಂಗ್ರೆಸ್ ಪ್ರಣಾಳಿಕೆ ಅಪಾಯಕಾರಿ, ಜಾರಿ ಸಾಧ್ಯವಿಲ್ಲ: ಸಚಿವ ಅರುಣ್ ಜೇಟ್ಲಿ
ಕಾಂಗ್ರೆಸ್ ಪ್ರಣಾಳಿಕೆ ಅಪಾಯಕಾರಿ, ಜಾರಿ ಸಾಧ್ಯವಿಲ್ಲ: ಸಚಿವ ಅರುಣ್ ಜೇಟ್ಲಿ
ನವದೆಹಲಿ: 2019ರ ಸಾರ್ವತ್ರಿಕ ಚುನಾವಣೆಗೆ ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆಯನ್ನು ಅಪಾಯಕಾರಿ ಪ್ರಣಾಳಿಕೆ ಎಂದು ಬಿಜೆಪಿ ಹೇಳಿದೆ. 
ಪ್ರಣಾಳಿಕೆ ಬಗ್ಗೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ಕಾಂಗ್ರೆಸ್ ಪ್ರಣಾಳಿಕೆ ಅಪಾಯಕಾರಿಯಾಗಿದ್ದು ಜಾರಿಗೆ ತರುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 
ಕಾಂಗ್ರೆಸ್ ನ ಪ್ರಣಾಳಿಕೆ ಭಾರತವನ್ನು ಒಡೆಯುವ ಅಜೆಂಡಾ ಹೊಂದಿದೆ. ಕಾಂಗ್ರೆಸ್ ಪ್ರಣಾಳಿಕೆ ಸಿದ್ಧಪಡಿಸುವುದಕ್ಕೆ ಸಮಿತಿ ಇದ್ದರೂ ಪ್ರಣಾಳಿಕೆಯ ಕೆಲವು ಅಂಶಗಳನ್ನು ಕಾಂಗ್ರೆಸ್ ಅಧ್ಯಕ್ಷರ ಸ್ನೇಹಿತರಾದ ಭಾರತ ಭಂಜಕ ಗ್ಯಾಂಗ್ ಸಿದ್ಧಪಡಿಸಿರುವಂತಿದೆ. 
ಜಮ್ಮು-ಕಾಶ್ಮೀರದ ವಿಷಯದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯನ್ನು ನೋಡಿದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸ್ನೇಹಿತರಾದ ಭಾರತ ಭಂಜಕ ಗ್ಯಾಂಗ್ ಸಿದ್ಧಪಡಿಸಿರುವಂತಿದೆ ಎಂದು ಜೇಟ್ಲಿ ವ್ಯಂಗ್ಯವಾಡಿದ್ದಾರೆ. 
ಕಾಂಗ್ರೆಸ್ ನ ಪ್ರಣಾಳಿಕೆಯಲ್ಲಿ ಕಾಶ್ಮೀರಿ ಪಂಡಿತರ ಸ್ಥಿತಿ ಬಗ್ಗೆ ಏನನ್ನೂ ಹೇಳಿಲ್ಲ. ರಾಷ್ಟ್ರದ್ರೋಹದ ಕಾನೂನನ್ನೇ ರದ್ದುಗೊಳಿಸುವಂತಹ ಪ್ರಣಾಳಿಕೆಗೆ ಒಂದೇ ಒಂದು ಮತವೂ ಅರ್ಹವಲ್ಲ ಎಂದು ಜೇಟ್ಲಿ ಹೇಳಿದ್ದಾರೆ.
ಬಡಕುಟುಂಬಗಳಿಗೆ ಪ್ರತಿ ವರ್ಶ 72,000 ರೂಪಾಯಿ, 22 ಲಕ್ಷ ಸರ್ಕಾರಿ ಹುದ್ದೆಗಳನ್ನು ತುಂಬುವುದು, ರೈತರಿಗೆ ಪ್ರತ್ಯೇಕ ಬಜೆಟ್, ಜಿಎಸ್ ಟಿ ದರ ಪರಿಷ್ಕರಣೆ, ಕಾಶ್ಮೀರದಲ್ಲಿ ಸೇನೆಗೆ ನೀಡಿರುವ ವಿಶೇಷ ಅಧಿಕಾರವನ್ನು ಮರುಪರಿಶೀಲನೆ ಮಾಡುವುದು ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆಯ ಮುಖ್ಯಾಂಶಗಳಾಗಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com