ನಾನು ವಯಾನಾಡ್ ನಿಂದ ಸ್ಪರ್ಧಿಸಲು ಮೋದಿ ತಾರತಮ್ಯ ಕಾರಣ: ರಾಹುಲ್ ಗಾಂಧಿ!
ನಾನು ವಯಾನಾಡ್ ನಿಂದ ಸ್ಪರ್ಧಿಸಲು ಮೋದಿ ತಾರತಮ್ಯ ಕಾರಣ: ರಾಹುಲ್ ಗಾಂಧಿ!

ನಾನು ವಯಾನಾಡ್ ನಿಂದ ಸ್ಪರ್ಧಿಸಲು ದಕ್ಷಿಣ ಭಾರತಕ್ಕೆ ಪ್ರಧಾನಿ ಮೋದಿ ತಾರತಮ್ಯ ಕಾರಣ: ರಾಹುಲ್ ಗಾಂಧಿ

ಉತ್ತರ ಪ್ರದೇಶದ ಅಮೇಥಿಯ ಜೊತೆಗೆ ಕೇರಳದ ವಯಾನಾಡ್ ನಿಂದ ಸ್ಪರ್ಧಿಸುತ್ತಿರುವುದರ ಬಗ್ಗೆ ಸ್ವತಃ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ.
ನವದೆಹಲಿ: ಉತ್ತರ ಪ್ರದೇಶದ ಅಮೇಥಿಯ ಜೊತೆಗೆ ಕೇರಳದ ವಯಾನಾಡ್ ನಿಂದ ಸ್ಪರ್ಧಿಸುತ್ತಿರುವುದರ ಬಗ್ಗೆ ಸ್ವತಃ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಭಾರತದೆಡೆಗೆ ತಾರತಮ್ಯ ತೋರುತ್ತಾರೆ. ಆದ್ದರಿಂದ  ಕೇರಳದಿಂದ ಸ್ಪರ್ಧಿಸುವುದಕ್ಕೆ ಒತ್ತಡ ಇತ್ತು. ಹಾಗಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. 
ದಕ್ಷಿಣ ಭಾರತದ ಜನರಿಗೆ ಪ್ರಧಾನಿ ಮೋದಿ ಸರ್ಕಾರ ತಾರತಮ್ಯ ತೋರುತ್ತಿದೆ ಎಂಬ ಭಾವನೆ ಇದೆ. ದೇಶದ ಪ್ರಮುಖ ನಿರ್ಧಾರಗಳಲ್ಲಿ ದಕ್ಷಿಣ ಭಾರತದವರನ್ನು ಪರಿಗಣಿಸುತ್ತಿಲ್ಲ ಎಂಬ ಅಸಮಾಧಾನವಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ಜನತೆಗೆ ನಾವು ಅವರೊಂದಿಗೆ ಇದ್ದೇವೆ ಎಂಬ ಸಂದೇಶ ರವಾನೆ ಮಾಡಲು ವಯಾನಾಡ್ ನಿಂದ ಸ್ಪರ್ಧಿಸುತ್ತಿರುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com