ನ್ಯಾಯ್ ಯೋಜನೆಗೆ ಚೋರ್ ಉದ್ಯಮಿಗಳ ಪಾಕೆಟ್ ನಿಂದ ಹಣ: ರಾಹುಲ್ ಗಾಂಧಿ

ಕಾಂಗ್ರೆಸ್ ನ ಬಹು ನಿರೀಕ್ಷಿತ ನ್ಯಾಯ್(ಬಡವರಿಗೆ ತಿಂಗಳಿಗೆ 6000 ರು. ನೀಡುವ ಕನಿಷ್ಠ ಆದಾಯ ಖಾತ್ರಿ ಯೋಜನೆ) ಯೋಜನೆಗೆ ಚೋರ್ ಉದ್ಯಮಿಗಳ...
ರಾಹುಲ್ ಗಾಂಧಿ
ರಾಹುಲ್ ಗಾಂಧಿ
ಬೋಕಕಾಟ್: ಕಾಂಗ್ರೆಸ್ ನ ಬಹು ನಿರೀಕ್ಷಿತ ನ್ಯಾಯ್(ಬಡವರಿಗೆ ತಿಂಗಳಿಗೆ 6000 ರು. ನೀಡುವ ಕನಿಷ್ಠ ಆದಾಯ ಖಾತ್ರಿ ಯೋಜನೆ) ಯೋಜನೆಗೆ ಚೋರ್ ಉದ್ಯಮಿಗಳ ಪಾಕೆಟ್ ನಿಂದ ಹಣ ತರುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬುಧವಾರ ಹೇಳಿದ್ದಾರೆ.
ಇಂದು  ಅಸ್ಸಾಂನಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನ್ಯಾಯ್ ಯೋಜನೆ ಅಡಿ ದೇಶದ ಶೇ.20ರಷ್ಟು ಬಡವರ ಖಾತೆಗೆ ವಾರ್ಷಿಕ 72 ಸಾವಿರ ರುಪಾಯಿ ಜಮೆ ಮಾಡುವುದಾಗಿ ಭರವಸೆ ನೀಡಿದರು.
ನ್ಯಾಯ್ ಯೋಜನೆಗೆ ಅನಿಲ್ ಅಂಬಾನಿಯಂತಹ ಚೌಕಿದಾರ್ ನರೇಂದ್ರ ಮೋದಿ ಅವರ ಆಪ್ತ ಚೋರ್ ಉದ್ಯಮಿಗಳ ಪಾಕೆಟ್ ನಿಂದ ಹಣ ತರುವುದಾಗಿ ರಾಹುಲ್ ಗಾಂಧಿ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅಂಬಾನಿಯಂತಹ ಶ್ರೀಮಂತರಿಗೆ ಮಾತ್ರ ಚೌಕಿದಾರನಾಗಿದ್ದು, ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ಶ್ರೀಮಂತರ ಖಾತೆಗೆ ಹಣ ಜಮೆ ಮಾಡಿದ್ದಾರೆ. ಆದರೆ ನಾವು ಬಡವರ ಖಾತೆಗೆ ಜಮೆ ಮಾಡುತ್ತೇವೆ ಎಂದರು.
ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ನೀಡಲು ಶಿಫಾರಸು ಮಾಡಿತ್ತು. ಆದರೆ ಯುಪಿಎ ಕೈಗೊಂಡಿದ್ದ ಎಲ್ಲಾ ಕ್ರಮಗಳನ್ನು ಮೋದಿ ನೇತೃತ್ವದ ಬಿಜೆಪಿ ಸರ್ಕಾರ ತೆರವುಗೊಳಿಸಿದೆ ಎಂದು ರಾಹುಲ್ ಆರೋಪಿಸಿದರು. ಅಲ್ಲದೆ ಈಶಾನ್ಯ ರಾಜ್ಯಗಳ ವಿರೋಧಿ ಪೌರತ್ವ ಮಸೂದೆಗೆ ನಾವು ಅವಕಾಶ ನೀಡುವುದಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com