ವಯನಾಡ್ ನಲ್ಲಿ ನಾಮಪತ್ರ; ಅಮೇಥಿ ಜನರಿಗೆ ರಾಹುಲ್ ಮಾಡಿದ ಅಪಮಾನ ಎಂದ ಸ್ಮೃತಿ ಇರಾನಿ

ಕಳೆದ 15 ವರ್ಷಗಳ ಕಾಲ ರಾಹುಲ್ ಗಾಂಧಿ ಅಮೇಥಿಯಲ್ಲಿ ಅಧಿಕಾರ ಅನುಭವಿಸಿ ಇದೀಗ ಸೋಲಿನ ಭೀತಿಯಿಂದ ವಯನಾಡ್ ನಿಂದ ಸ್ಪರ್ಧಿಸುತ್ತಿದ್ದಾರೆ. ಇದು ಅವರು ಅಮೇಥಿ ಜನರಿಗೆ ಮಾಡಿದ ದೊಡ್ಡ ಅಪಮಾನ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
ಕೇಂದ್ರ ಸಚಿವೆ ಸ್ಮೃತಿ ಇರಾನಿ
ಕೇಂದ್ರ ಸಚಿವೆ ಸ್ಮೃತಿ ಇರಾನಿ
ಅಮೇಥಿ: ಕಳೆದ 15 ವರ್ಷಗಳ ಕಾಲ ರಾಹುಲ್ ಗಾಂಧಿ ಅಮೇಥಿಯಲ್ಲಿ ಅಧಿಕಾರ ಅನುಭವಿಸಿ ಇದೀಗ ಸೋಲಿನ ಭೀತಿಯಿಂದ ವಯನಾಡ್ ನಿಂದ ಸ್ಪರ್ಧಿಸುತ್ತಿದ್ದಾರೆ. ಇದು ಅವರು ಅಮೇಥಿ ಜನರಿಗೆ ಮಾಡಿದ ದೊಡ್ಡ ಅಪಮಾನ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
ಅತ್ತ ಕೇರಳದ ವಯನಾಡ್ ನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸುತ್ತಿದ್ದಂತೆಯೇ ಇತ್ತ ಅಮೇಥಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ತೀವ್ರ ಕಿಡಿಕಾರಿದ ಸ್ಮೃತಿ ಇರಾನಿ, 'ಕಳೆದ 15 ವರ್ಷಗಳಲ್ಲಿ ಅಮೇಥಿ ಜನರ ಬೆಂಬಲದೊಂದಿಗೆ ರಾಹುಲ್ ಗಾಂಧಿ ಜಯ ಗಳಿಸಿದ್ದಾರೆ. ಆದರೆ ಈಗ ಬೇರೆ ಎಲ್ಲಿಗೋ ಹೋಗಿ ಸ್ಪರ್ಧೆಗಿಳಿದಿದ್ದಾರೆ. ಇದು ಅಮೇಥಿ ಜನರಿಗೆ ಮಾಡಿರುವ ಅವಮಾನವಾಗಿದ್ದು, ಇಲ್ಲಿನ ಜನರು ಇದನ್ನು ಸಹಿಸಲಾರರು. ರಾಹುಲ್ ಗಾಧಿ ಅವರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com