ದ್ವೇಷ ಬಿತ್ತುವ ಸರ್ಕಾರವನ್ನು ಕಿತ್ತೊಗೆಯಿರಿ: ಕಾರ್ನಾಡ್, ನಾಸಿರುದ್ದೀನ್ ಶಾ ಸೇರಿ 600 ರಂಗಕರ್ಮಿಗಳ ಮನವಿ

ಈ ಚುನಾವಣೆಯಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳನ್ನು ಅಧಿಕಾರದಿಂದ ದೂರವಿಡದಿದ್ದರೆ ಭಾರತ ಹಾಗೂ ಭಾರತೀಯ ಸಂವಿಧಾನಕ್ಕೆ ಅಪಾಯವಿದೆ ಎಂದು ನಾಸಿರುದ್ದೀನ್ ಶಾ...
ರಂಗಕರ್ಮಿಗಳಾದ ಅಮೋಲ್ ಪಾಲೇಕರ್, ನಾಸಿರುದ್ದೀನ್ ಶಾ ಹಾಗೂ ಗಿರೀಶ್ ಕಾರ್ನಾಡ್
ರಂಗಕರ್ಮಿಗಳಾದ ಅಮೋಲ್ ಪಾಲೇಕರ್, ನಾಸಿರುದ್ದೀನ್ ಶಾ ಹಾಗೂ ಗಿರೀಶ್ ಕಾರ್ನಾಡ್
ಮುಂಬೈ: ಈ ಚುನಾವಣೆಯಲ್ಲಿ  ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳನ್ನು ಅಧಿಕಾರದಿಂದ ದೂರವಿಡದಿದ್ದರೆ ಭಾರತ ಹಾಗೂ ಭಾರತೀಯ ಸಂವಿಧಾನಕ್ಕೆ ಅಪಾಯವಿದೆ ಎಂದು ನಾಸಿರುದ್ದೀನ್ ಶಾ,  ಗಿರೀಶ್ ಕಾರ್ನಾಡ್ , ಉಷಾ ಗಂಗೂಲಿ ಸೇರಿದಂತೆ  600 ಕ್ಕೂ ಹೆಚ್ಚು ರಂಗ ನಿರ್ದೇಶಕರು ಕರೆ ನೀಡಿದ್ದಾರೆ.
"ಧರ್ಮಾಂಧತೆ, ದ್ವೇಷ ಹಾಗೂ ಸಂವೇದನಾ ಶೀಲತೆ ಇಲ್ಲದಿರುವವರನ್ನು ಅಧಿಕಾರದಿಂದ ಕಿತ್ತೆಸೆಯಿರಿ, ಮುಂಬರುವ ಲೋಕಸಭೆ ಚುನಾವಣೆ ದೇಶದ ಇತಿಹಾಸದಲ್ಲಿ "ಅತ್ಯಂತ ಕ್ಲಿಷ್ಟಕರ" ಆಗಿದೆ ಎಂದು  ಆರ್ಟಿಸ್ಟ್ ಯುನೈಟ್ ಇಂಡಿಯಾ ವೆಬ್ ತಾಣದಲ್ಲಿ  ಗುರುವಾರ ಸಂಜೆ 12 ಭಾಷೆಗಳಲ್ಲಿ ಮನವಿ ಪತ್ರವನ್ನು ಪ್ರಕಟಿಸಲಾಗಿದೆ.
ಪತ್ರದಲ್ಲಿ ಸಹಿ ಮಾಡಿದವರ ಪೈಕಿ ಶಾಂತ ಗೋಖಲೆ, ಮಹೇಶ್ ಎಲ್ಕುಂಚಾರ್, ಹೇಶ್ ದತ್ತಾಣಿ, ಅರುಂಧತಿ ನಾಗ್, ಕೀರ್ತಿ ಜೈನ್, ಅಭಿಷೇಕ್ ಮಜುಂದಾರ್, ಕೊಂಕಣ ಸೇನ್ ಶರ್ಮಾ, ರತ್ನ ಪಾಠಕ್ ಷಾ ಲಿಲ್ಲೆಟ್ ದುಬೆ, ಮಿತಾ ವಶಿಷ್ಠ, ಎಂ ಕೆ ರೈನಾ, ಅನುರಾಗ್ ಕಶ್ಯಪ್.ಗಿರೀಶ್ ಕಾರ್ನಾಡ್ ಸಹ ಸೇರಿದ್ದಾರೆ.
"ಇಂದು, ಭಾರತದ ಕಲ್ಪನೆಯು ಬೆದರಿಕೆಯಲ್ಲಿದೆ, ಇಂದು, ಹಾಡು, ನೃತ್ಯ ಹಾಸ್ಯದ ಚಟಾಕಿಗಳಿಗೆ ಬೆದರಿಕೆ ಇದೆ.ಇಂದು ನಮ್ಮ ಪ್ರೀತಿಯ ಸಂವಿಧಾನವು ಅಪಾಯದಲ್ಲಿದೆ" ಎಂದು ಅವರು ಹೇಳಿದರು.  ಚರ್ಚೆ ಮತ್ತು ಭಿನ್ನಾಭಿಪ್ರಾಯವನ್ನು ಮಾಡಲು ಯಾರೂ ತಯಾರಿಲ್ಲ. ಅಂತಹಾ ಚರ್ಚೆ ನಡೆಸುವ ಸಂಸ್ಥೆಗಳನ್ನು  "ಉಸಿರುಗಟ್ಟಿಸಲಾಗುತ್ತಿದೆ" ಪ್ರಜಾಪ್ರಭುತ್ವವು ಅಪಾಯದಂಚಿನಲ್ಲಿದೆ.ಪ್ರಜಾಪ್ರಭುತ್ವವು ಪ್ರಶ್ನಿಸದೆ, ಚರ್ಚೆ ಇಲ್ಲದೆ  ಮತ್ತು ತೀವ್ರವಾದ ವಿರೋಧವಿಲ್ಲದೆ ಕಾರ್ಯನಿರ್ವಹಿಸಲಾರದು. ಆದರೆ ಪ್ರಸ್ತುತ ಸರ್ಕಾರದಲ್ಲಿ ಇದೆಲ್ಲವೂ ಕಣ್ಮರೆಯಾಗುತ್ತಿದೆ.
"ಐದು ವರ್ಷಗಳ ಹಿಂದೆ ಅಭಿವೃದ್ಧಿಯ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಹಿಂದುತ್ವ ಗೂಂಡಾಗಿರಿ, ದ್ವೇಷ ಮತ್ತು ಹಿಂಸಾಚಾರದ ರಾಜಕೀಯ ನಡೆಸಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿತಮ್ಮ ಸರ್ಕಾರದ ನೀತಿಗಳ ಮೂಲಕ ಅನೇಕ ಜನರ ಜೀವನವನ್ನು ನಾಶಪಡಿಸಿದ್ದಾರೆ ಮತ್ತು ಅವರು ನೀಡಿದ್ದ ಭರವಸೆ ಈಡೇರಿಸಲು ವಿಫಲರಾಗಿದ್ದಾರೆ." ಪತ್ರದಲ್ಲಿ ಹೇಳಿದೆ. ಆದರೆ ಪತ್ರದಲ್ಲಿ ಪ್ರಧಾನಿ ಹೆಸ್ಸರನ್ನು ಉಲ್ಲೇಖಿಸಲಿಲ್ಲ.
"ಕಪ್ಪು ಹಣವನ್ನು ಮರಳಿ ತರುವುದಾಗಿ ಅವರು ಹೇಳೀದ್ದರು.  ಆದರೆ ಅವರೇ ರಾಕ್ಷಸರಾಗಿ ದೇಶವನ್ನು ಲೂಟಿ ಮಾಡಿದ್ದಾರೆ.ಅಲ್ಲದೆ ಲೂಟಿ ಮಾಡಿದ ರಾಕ್ಷಸರು ದೇಶವನ್ನು ಬಿಟ್ಟು ಪರಾರಿಯಾಗುತ್ತಿದ್ದಾರೆ. ಶ್ರೀಮಂತರ ಸಂಪತ್ತು ಬ್ರಹ್ಮಾಂಡದಷ್ಟು ಬೆಳೆದಿದೆ, ಬಡವರು ಮಾತ್ರ ಬಡವರಾಗಿಯೇ ಇದ್ದಾರೆ.
"ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಪ್ರೀತಿ ಮತ್ತು ಸಹಾನುಭೂತಿಗಾಗಿ ಮತ ಚಲಾಯಿಸಲು ನಮ್ಮ ಸಹವರ್ತಿ ನಾಗರಿಕರಿಗೆ ನಾವು ಮನವಿ ಮಾಡುತ್ತೇವೆ. ಕಪ್ಪು ಕತ್ತಲೆ, ದೇಶಕ್ಕೆ ಅಪಾಯವಾಗಿರುವ ಶಕ್ತಿಗಳನ್ನು ಸೋಲಿಸಿ" ಪತ್ರದಲ್ಲಿ ಬರೆಯಲಾಗಿದೆ.
ಕಳೆದ ವಾರ ಇದೇ ರೀತಿಯ ಮನವಿಯನ್ನು ಭಾರತೀಯ ಚಿತ್ರ ನಿರ್ಮಾಪ್ಕರುಗಳು ಮಾಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com