ಪ್ರಧಾನಿ ಮೋದಿ ಚರಂಡಿ-ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ: ಅಹ್ಮದ್‌ ಪಟೇಲ್‌

ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಹಿರಿಯ ಕಾಂಗ್ರೆಸ್‌ ನಾಯಕ ಅಹ್ಮದ್‌...
ಅಹ್ಮದ್ ಪಟೇಲ್
ಅಹ್ಮದ್ ಪಟೇಲ್
ನವದೆಹಲಿ: ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಹಿರಿಯ ಕಾಂಗ್ರೆಸ್‌ ನಾಯಕ ಅಹ್ಮದ್‌ ಪಟೇಲ್‌ ಅವರು, ಮೋದಿ ಚರಂಡಿ - ಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಡೆಹ್ರಾಡೂನ್ ನಲ್ಲಿ ಬಿಜೆಪಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಅಗಸ್ಟಾ ವೆಸ್ಟ್‌ ಲ್ಯಾಂಡ್‌ ಹಗರಣದಲ್ಲಿ ಗಾಂಧಿ ಕುಟುಂಬ ಮತ್ತು ಅಹ್ಮದ್‌ ಪಟೇಲ್‌ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದರು.
ಮೋದಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅಹ್ಮದ್ ಪಟೇಲ್ ಅವರು, “ಪ್ರಧಾನಿ ಮೋದಿ ಅವರದ್ದು ಅತ್ಯಂತ ಕೀಳು ರೀತಿಯ, ಚರಂಡಿ - ಮಟ್ಟದ ರಾಜಕಾರಣ’ಎಂದು ಟೀಕಿಸಿದ್ದಾರೆ.
“ನಾನು ಮಾಧ್ಯಮದಲ್ಲಿ ಕಂಡ ಪ್ರಕಾರ, ಅಗಸ್ಟಾ ವೆಸ್ಟ್‌ ಲ್ಯಾಂಡ್‌ ಪ್ರಕರಣದಲ್ಲಿ ಲಂಚ ಕೇಳಿದ ವ್ಯಕ್ತಿ AP ಮತ್ತು FAM ಎಂದು ಗೊತ್ತಾಗಿದೆ. ಹಗರಣದ ಚಾರ್ಜ್‌ ಶೀಟ್‌ನಲ್ಲಿ AP ಎಂದರೆ ಅಹ್ಮದ್‌ ಪಟೇಲ್‌ ಎಂದೂ FAM ಎಂದರೆ ಫ್ಯಾಮಿಲಿ ಎಂದೂ ಉಲ್ಲೇಖೀಸಲಾಗಿದೆ. ಯಾವ ಫ್ಯಾಮಿಲಿಗೆ ಅಹ್ಮದ್‌ ಪಟೇಲ್‌ ನಿಕಟರಾಗಿದ್ದಾರೆ ಎಂದು ಈಗ ನೀವೇ ಹೇಳಿ’ ಎಂದು ಜನರನ್ನು ಪ್ರಶ್ನಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com