ಲೋಕಸಭೆ ಚುನಾವಣೆ: ಸಂಸ್ಥಾಪನಾ ದಿನವೇ ಬಿಜೆಪಿ ತೊರೆದು 'ಕೈ' ಹಿಡಿದ ಶತ್ರುಘ್ನ ಸಿನ್ಹಾ

ಕಡೆಗೂ ನಟ, ರಾಜಕಾರಣಿ ಶತ್ರುಘ್ನ ಸಿನ್ಹಾ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಆ ಮೂಲಕ ಅವರು ತಮ್ಮ ಬಗ್ಗೆ ಇದುವರೆಗಿದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಶತ್ರುಘ್ನ ಸಿನ್ಹಾ
ಶತ್ರುಘ್ನ ಸಿನ್ಹಾ
ನವದೆಹಲಿ: ಕಡೆಗೂ ನಟ, ರಾಜಕಾರಣಿ ಶತ್ರುಘ್ನ ಸಿನ್ಹಾ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಆ ಮೂಲಕ ಅವರು ತಮ್ಮ ಬಗ್ಗೆ ಇದುವರೆಗಿದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಬಿಹಾರದ ಪಟ್ನಾ ಸಾಹಿಬ್ ಕ್ಷೇತ್ರದಿಂದ ಎರಡು ಬಾರಿ ಬಿಜೆಪಿ ಪಕ್ಷದಿಂದ ಆಯ್ಕೆಯಾಗಿದ್ದ ಸಿನ್ಹಾ ಇತ್ತೀಚೆಗೆ ಬಿಜೆಪಿ ವಿರುದ್ಧವೇ ಬಂಡಾಯ ಘೋಷಿಸಿದ್ದರು. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸುತ್ತಾ ಬಂದಿದ್ದ ಸಿನ್ಹಾ  ಅವರನ್ನು ಈ ಬಾರಿ ಬಿಜೆಪಿ ಮೂಲೆಗೆ ತಳ್ಳಿ ಪಾಟ್ನಾ ಸಾಹಿಬ್ ನಿಂದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಟಿಕೆಟ್ ನಿಡಿತ್ತು.
ಸಿನ್ಹಾ ಅವರನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. 
"ಸಿನ್ಹಾ ಓರ್ವ ಚಾಣಾಕ್ಶ್ಃಅ ಣಾಯಕರಾಗಿದ್ದು ದುರದೃಷ್ಟವಶಾತ್ ಅವರು ಇಷ್ಟು ದಿನ ತಮ್ಮ ವ್ಯಕ್ತಿಒತ್ವಕ್ಕೆ ಒಪ್ಪದ ಪಕ್ಷದಲ್ಲಿದ್ದರು" ವೇಣುಗೋಪಾಲ್ ಹೇಳಿದ್ದಾರೆ.
ಇದಕ್ಕೆ ಮುನ್ನ ಇಂದು ಬೆಳಿಗ್ಗೆ ಟ್ವೀಟ್ ಮಾಡಿದ್ದ ಸಿನ್ಹಾ "ನಾನು ಭಾರತೀಯ ಜನತಾ ಪಕ್ಷ ತೊರೆಯುತ್ತಿದ್ದೇನೆ. ಇದು ನನಗೆ ಅತ್ಯಂತ ನೋವುಂಟು ಂಆಡಿದೆ. ಏಪ್ರಿಲ್ 6 ರಂದು ನಮ್ಮೆಲ್ಲರಿಗೂ ತಿಳಿದಿರುವಂತೆ ಪಕ್ಷದ ಸಂಸ್ಥಾಪನಾ ದಿನ. ನಾನು ಈ ಪಾರ್ಟಿಯಲ್ಲಿ ಭಾರತ ರತ್ನ ನಾನಾಜಿ ದೇಶಮುಖ್, , ದಿವಂಗತ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಮಾರ್ಗದರ್ಶನ ಮತ್ತು ಆಶೀರ್ವಾದದೊಂದಿಗೆ ಬೆಳೆದಿದ್ದೇನೆ. ಸ್ನೇಹಿತ ತತ್ವಜ್ಞಾನಿ, ಮಹಾನ್ ನೇತಾರ ಅಡ್ವಾನಿ ಅವರ ಮಾರ್ಗದರ್ಶನವಿತ್ತು, ಈಗ ಅವನ್ನು ತೊರೆದು ಹೋಗುತ್ತಿದ್ದೇನೆ
"ನಿಜವಾದ ಅರ್ಥದಲ್ಲಿ ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತಿದ್ದೇನೆ ಎಂದು ಈ ಹೆಂದೆ ಮಾರ್ಚ್ 31ರಂದು ಶತ್ರುಘ್ನ ಸಿನ್ಹಾ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com