'ತುಕ್‌ಡೇ' ಗ್ಯಾಂಗ್ ಗೆ ದೀದಿ ಬೆಂಬಲ: ಪ್ರಧಾನಿ ನರೇಂದ್ರ ಮೋದಿ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ದೇಶಕ್ಕೆ ಇಬ್ಬರು ಪ್ರಧಾನಿಗಳು ಬೇಕೆಂಬುವವರನ್ನು ಬೆಂಬಲಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಕೂಚ್ ಬೆಹರ್ ನಲ್ಲಿ  ಪ್ರಧಾನಿ ನರೇಂದ್ರ ಮೋದಿ
ಕೂಚ್ ಬೆಹರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ
ಕೂಚ್ ಬೆಹರ್: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ದೇಶಕ್ಕೆ ಇಬ್ಬರು ಪ್ರಧಾನಿಗಳು ಬೇಕೆಂಬುವವರನ್ನು ಬೆಂಬಲಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. 
ಏ.07 ರಂದು ಪಶ್ಚಿಮ ಬಂಗಾಳದ ಕೂಚ್ ಬೆಹರ್ ನಲ್ಲಿ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ದೀದಿ ತುಕ್‌ಡೇ ಗ್ಯಾಂಗ್ ನ್ನು ಬೆಂಬಲಿಸುತ್ತಾರೆ. ದೇಶಕ್ಕೆ ಇಬ್ಬರು ಪ್ರಧಾನಿಗಳು ಬೇಕೆಂಬುವವರನ್ನು ದೀದಿ ಬೆಂಬಲಿಸುತ್ತಾರೆ. ಒಬ್ಬ ಪ್ರಧಾನಿ ಭಾರತಕ್ಕಾದರೆ ಮತ್ತೋರ್ವ ಜಮ್ಮು-ಕಾಶ್ಮೀರಕ್ಕೆ ಪ್ರಧಾನಿಯಾಗಲಿದ್ದಾರೆ. ಇಂತಹ ಬೇಡಿಕೆಯನ್ನು ನೀವೂ ಬೆಂಬಲಿಸುತ್ತೀರಾ? ಎಂದು ಜನತೆಯನ್ನು ಪ್ರಶ್ನಿಸಿದ್ದಾರೆ. 
ಜನರು ಪ್ರಧಾನಿ ಹೆಸರನ್ನು ಜಪಿಸುತ್ತಿರುವುದು ಮಮತಾ ಬ್ಯಾನರ್ಜಿಯ ನಿದ್ದೆ ಕೆಡಿಸಿದೆ. ನೀವು ಮೋದಿ ಮೋದಿ ಎಂದು ಕೂಗಿದಷ್ಟೂ ದೀದಿಯ ನಿದ್ರಾಭಂಗವಾಗುತ್ತಿದೆ. ರಾಜ್ಯದ ಅಭಿವೃದ್ಧಿಗೆ ದೀದಿ ಸ್ಪೀಡ್ ಬ್ರೇಕರ್ ಆಗಿದ್ದಾರೆ ಎಂದು ಮೋದಿ ಆರೋಪಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com