ಫೇಸ್ ಬುಕ್ ನಲ್ಲಿ 10 ಕೋಟಿ ರೂ.ದಾಟಿದ ರಾಜಕೀಯ ಜಾಹೀರಾತುಗಳ ವೆಚ್ಚ; ಬಿಜೆಪಿ ಮುಂಚೂಣಿ

ಲೋಕಸಭೆ ಚುನಾವಣೆ ದಿನ ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಕೂಡ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಲೋಕಸಭೆ ಚುನಾವಣೆ ದಿನ ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಕೂಡ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಅವರ ಅಭಿಮಾನಿಗಳು ಪ್ರಚಾರ ಮಾಡುತ್ತಿದ್ದಾರೆ. ಕಳೆದ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ವಿವಿಧ ರಾಜಕೀಯ ಪಕ್ಷಗಳು ಮತ್ತು ಅವರ ಬೆಂಬಲಿಗರು 10 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಫೇಸ್ ಬುಕ್ ನಲ್ಲಿ ಜಾಹೀರಾತಿಗೆ ಖರ್ಚು ಮಾಡಿದ್ದಾರೆ.
ಫೇಸ್ ಬುಕ್ ನ ಆಡ್ ಲೈಬ್ರೆರಿ ವರದಿ ಪ್ರಕಾರ, ಫೆಬ್ರವರಿಯಿಂದ ಮಾರ್ಚ್ 30ರವರೆಗೆ ಫೇಸ್ ಬುಕ್ ನಲ್ಲಿ 51 ಸಾವಿರದ 810 ರಾಜಕೀಯ ಜಾಹೀರಾತುಗಳು ಬಂದಿದ್ದು ಅವುಗಳಿಗೆ 10.32 ಕೋಟಿ ರೂಪಾಯಿ ಖರ್ಚಾಗಿದೆ. ಅದರಲ್ಲಿ ಬಿಜೆಪಿ ಮತ್ತು ಅದರ ಬೆಂಬಲಿಗರಿಂದ ಬಂದ ಜಾಹೀರಾತುಗಳೇ ಹೆಚ್ಚು. ಕಳೆದ ತಿಂಗಳು ಮಾರ್ಚ್ 23ರವರೆಗೆ ಇಂತಹ ರಾಜಕೀಯ ಜಾಹೀರಾತುಗಳು 41 ಸಾವಿರದ 974 ಇದ್ದು ಅವುಗಳಿಗೆ 8.58 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ.
ರಾಜಕೀಯ ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯಗಳಿಗೆ ಸಂಬಂಧಪಟ್ಟ ಜಾಹೀರಾತುಗಳಾಗಿವೆ ಎಂದು ಫೇಸ್ ಬುಕ್ ತಿಳಿಸಿದೆ. ಆಡಳಿತಾರೂಢ ಭಾರತೀಯ ಜನತಾ ಪಾರ್ಟಿಯಿಂದ ಭಾರತ್ ಕೆ ಮನ್ ಕಿ ಬಾತ್ ಪುಟದಲ್ಲಿ 3 ಸಾವಿರದ 700 ಜಾಹೀರಾತುಗಳು ಪ್ರಕಟವಾಗಿದ್ದು 2.23 ಕೋಟಿಗೂ ಅಧಿಕ ಹಣ ಫೇಸ್ ಬುಕ್ ಸಂಸ್ಥೆಗೆ ಬಂದಿವೆ.
ಮೈ ಫಸ್ಟ್ ವೋಟ್ ಫಾರ್ ಮೋದಿ ಎಂಬ ಪುಟಕ್ಕೆ ಬಿಜೆಪಿ ಸಾವಿರದ 100 ಜಾಹೀರಾತುಗಳಿಗೆ ಬಿಜೆಪಿ 36.2 ಲಕ್ಷ ರೂಪಾಯಿ, ನೇಶನ್ ವಿತ್ ನಮೊ ಜಾಹೀರಾತಿಗೆ ಅಧಿಕ ಹಣವನ್ನು ವೆಚ್ಚ ಮಾಡಿದೆ. ಇದಕ್ಕೆ ಹೋಲಿಸಿದರೆ ಕಾಂಗ್ರೆಸ್ ಪುಟದಲ್ಲಿ 410 ಜಾಹೀರಾತುಗಳಿಗೆ 5.91 ಲಕ್ಷ ರೂಪಾಯಿ ಫೆಬ್ರವರಿಯಿಂದ ಮಾರ್ಚ್ 30ರವರೆಗೆ ವೆಚ್ಚ ಮಾಡಲಾಗಿದೆ.
ಬಿಜ್ಜು ಜನತಾ ದಳ 8.56 ಲಕ್ಷ ರೂಪಾಯಿ, ತೆಲುಗು ದೇಶಂ ಪಾರ್ಟಿ 1.58 ಲಕ್ಷ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ 58 ಸಾವಿರದ 355 ರೂಪಾಯಿ ಖರ್ಚು ಮಾಡಿದೆ.
ಭಾರತದಲ್ಲಿ 200 ದಶಲಕ್ಷಕ್ಕೂ ಅಧಿಕ ಫೇಸ್ ಬುಕ್ ಬಳಕೆದಾರರಿದ್ದು ಜಾಹೀರಾತುಗಳ ನಿಖರತೆ ಮತ್ತು ಪಾರದರ್ಶಕತೆ ಕಾಪಾಡಲು ಸಂಸ್ಥೆ ಬದ್ಧವಾಗಿದೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com