ಜಗನ್, ಕೆ ಚಂದ್ರಶೇಖರ್ ರಾವ್ ಮೋದಿಯ 'ಸಾಕು ನಾಯಿಗಳು- ಚಂದ್ರಬಾಬು ನಾಯ್ಡು

ವೈಎಸ್ ಆರ್ ಕಾಂಗ್ರೆಸ್ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಹಾಗೂ ಟಿಆರ್ ಎಸ್ ಮುಖ್ಯಸ್ಥ ಕೆ ಚಂದ್ರಶೇಖರ್ ರಾವ್ ಮೋದಿಯ ಸಾಕು ನಾಯಿಗಳು ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಲೇವಡಿ ಮಾಡಿದ್ದಾರೆ.
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು

ಕೃಷ್ಣಾ: ನೆರೆಯ ಆಂಧ್ರಪ್ರದೇಶದಲ್ಲಿ ರಾಜಕೀಯ ನಾಯಕರುಗಳ ವಾಕ್ಸಮರ ತೀರ ಕೆಳಮಟ್ಟಕ್ಕೆ ಇಳಿದಿದೆ. ವೈಎಸ್ ಆರ್  ಕಾಂಗ್ರೆಸ್ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಹಾಗೂ ಟಿಆರ್ ಎಸ್  ಮುಖ್ಯಸ್ಥ ಕೆ ಚಂದ್ರಶೇಖರ್ ರಾವ್ ಮೋದಿಯ ಸಾಕು ನಾಯಿಗಳು ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಲೇವಡಿ ಮಾಡಿದ್ದಾರೆ.

ಮಚಲ್ಲಿಪಟ್ಟಣಂ ಭಾಗದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಚಂದ್ರಬಾಬು ನಾಯ್ಡು, ಜಗನ್ ಮೋಹನ್ ರೆಡ್ಡಿ ನಾಯಿ ಬಿಸ್ಕತ್ ತಿನ್ನುವುದು ನಾಚಿಕೆಗೇಡಿನದು, ಜಗನ್ ಮೋಹನ್ ರೆಡ್ಡಿ ಹಾಗೂ ಕೆಸಿ ಆರ್ ಮೋದಿಯ ಸಾಕು ನಾಯಿಗಳಾಗಿದ್ದು, ಒಂದು ಬಿಸ್ಕತ್ ಗಾಗಿ ಮೋದಿ ಪಾದದ ಹತ್ತಿರ ಬಿದ್ದಿರುತ್ತಾರೆ. ನಂತರ  ಆ ಬಿಸ್ಕತ್ ನ್ನು ನಿಮಗೂ ಹಂಚುತ್ತಾರೆ, ಎಚ್ಚರಿಕೆಯಿಂದ ಇರುವಂತೆ ಹೇಳಿದರು.

ವೈಎಸ್ ಆರ್ ಕಾಂಗ್ರೆಸ್ ಚುನಾವಣಾ ಪ್ರಚಾರಕ್ಕಾಗಿ ಬಿಜೆಪಿ ಹಾಗೂ ಟಿಆರ್ ಎಸ್ ಹಣ ನೀಡುತ್ತಿವೆ ಎಂದು ಆರೋಪಿಸಿದ ಚಂದ್ರಬಾಬು ನಾಯ್ಡು ಕೋಟಿ ಹಣ ಖರ್ಚು ಮಾಡಿದ್ದರೂ ಅವರು ಗೆಲ್ಲಲು ಸಾಧ್ಯವಿಲ್ಲ ಎಂದರು.

ಮೋದಿ ಹಾಗೂ ಕೆಸಿ ಚಂದ್ರಶೇಖರ ರಾವ್ ಜಗನ್ ಗಾಗಿ ಸಾವಿರಾರು ಕೋಟಿ ರೂ. ನೀಡಿದ್ದಾರೆ. ನಿಮ್ಮಗೆ ಏಕೆ ಆ ಹಣವನ್ನು ನೀಡುವುದಿಲ್ಲ? ನಮ್ಮ ರಾಜ್ಯದ ಹಣವನ್ನು ನಮಗೆ ಯಾಕೆ ನೀಡುವುದಿಲ್ಲ? ನೀವು 10 ಸಾವಿರ ಕೋಟಿ ವೆಚ್ಚ ಮಾಡಿದ್ದರೂ ಸಿಂಗಲ್ ವೋಟ್ ಪಡೆಯಲು ಸಾಧ್ಯವಿಲ್ಲ , ಆಂಧ್ರ ಜನರು ನಿಮ್ಮಗಳ ವಿರುದ್ಧ ತೀವ್ರ ಆಕ್ರೋಶ ಗೊಂಡಿದ್ದಾರೆ ಎಂದು ಚಂದ್ರಬಾಬು ನಾಯ್ಡು ಹೇಳಿದರು.

ಆಂಧ್ರಪ್ರದೇಶದಲ್ಲಿ ಏಪ್ರಿಲ್ 11 ರಂದು ಲೋಕಸಭಾ ಹಾಗೂ ಆಸೆಂಬ್ಲಿ ಚುನಾವಣೆ ಏಕಕಾಲದಲ್ಲಿ ನಡೆಯಲಿದ್ದು, ಮೇ 23 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com