ವಿಪಕ್ಷ ನಾಯಕರ ಮೇಲೆ ಐಟಿ ದಾಳಿ: ಸಿಬಿಡಿಟಿ ಮುಖ್ಯಸ್ಥ, ಆದಾಯ ಕಾರ್ಯದರ್ಶಿಗೆ ಚುನಾವಣಾ ಆಯೋಗ ಬುಲಾವ್!

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬೇಕು ಅಂತಲೆ ವಿಪಕ್ಷ ನಾಯಕರನ್ನು ಟಾರ್ಗೆಟ್ ಮಾಡಿ ಐಟಿ ದಾಳಿ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದ್ದು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬೇಕು ಅಂತಲೆ ವಿಪಕ್ಷ ನಾಯಕರನ್ನು ಟಾರ್ಗೆಟ್ ಮಾಡಿ ಐಟಿ ದಾಳಿ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದ್ದು ಈ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಸಿಬಿಡಿಟಿ ಮುಖ್ಯಸ್ಥ ಹಾಗೂ ಆದಾಯ ಕಾರ್ಯದರ್ಶಿಗೆ ಬುಲಾವ್ ನೀಡಿದ್ದಾರೆ. 
ಕೇಂದ್ರ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ಮುಖ್ಯಸ್ಥ ಪಿಸಿ ಮೂಡಿ ಹಾಗೂ ಆದಾಯ ಕಾರ್ಯದರ್ಶಿ ಎಬಿ ಪಾಂಡೆ ಅವರಿಗೆ ಚುನಾವಣಾ ಆಯೋಗ ವಿಪಕ್ಷ ನಾಯಕರ ಮೇಲೆ ದಾಳಿ ಕುರಿತಂತೆ ಸ್ಪಷ್ಟನೆ ನೀಡಲು ಬರುವಂತೆ ಸೂಚಿಸಿದೆ.
ಹಣಕಾಸು ಮತ್ತು ಕಂದಾಯ ಸಚಿವಾಲಯಗಳ ಅಧೀನದಲ್ಲಿರುವ ತನಿಖಾ ಸಂಸ್ಥೆಗಳು ಚುನಾವಣೆ ವೇಳೆ ತಟಸ್ಥ ಧೋರಣೆ ಹೊಂದಿರುವುದು ಒಳ್ಳೆಯದು ಎಂದು ಚುನಾವಣಾ ಆಯೋಗವು ಗಂಭೀರ ಸಲಹೆ ನೀಡಿತ್ತು. ಅಲ್ಲದೆ ಜಾರಿಯಲ್ಲಿರುವ ಅವಧಿಯಲ್ಲಿ ಚುನಾವಣೆ ಉದ್ದೇಶಕ್ಕಾಗಿ ಕಪ್ಪುಹಣದ ಬಳಕೆಯಾಗುತ್ತಿದೆ ಎನ್ನುವ ಗುಮಾನಿ ಇದ್ದರೆ ಅಥವಾ ಪ್ರಕರಣಗಳ ಕುರಿತು ಮಾಹಿತಿ ಸಿಕ್ಕರೆ ಆಯಾ ರಾಜ್ಯದ ಮುಖ್ಯ ಚುನಾವಣಾಧಿಕಾರಿಯವರಿಗೆ ಮಾಹಿತಿ ನೀಡಿಯೇ ದಾಳಿ ನಡೆಸಬೇಕು ಎಂದೂ ಆಯೋಗ ನಿರ್ದೇಶನ ನೀಡಿತ್ತು. 
ಐಟಿ ಅಧಿಕಾರಿಗಳು ಮಧ್ಯಪ್ರದೇಶ, ನವದೆಹಲಿಯಲ್ಲಿ ಭಾನುವಾರ ಹಾಗೂ ಚುನಾವಣೆ ಘೋಷಣೆಯಾದ ಬಳಿಕ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡುಗಳಲ್ಲಿ ದಾಳಿ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಪಷ್ಟನೆಗಾಗಿ ಚುನಾವಣಾ ಆಯೋಗ ಸೂಚನೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com