ನಕಲಿ ಸುದ್ದಿಗಳು,ಚುನಾವಣಾ ಅಪರಾಧಗಳ ವಿರುದ್ಧದ ಹೋರಾಟಕ್ಕೆ ಸ್ಮಾರ್ಟ್ ಪೋನ್ ಪ್ರಮುಖ ಅಸ್ತ್ರ- ಚುನಾವಣಾ ಆಯೋಗ

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ ಚುನಾವಣೆಯ ಸಂದರ್ಭದಲ್ಲಿ ನಕಲಿ ಸುದ್ದಿಗಳು,ಚುನಾವಣಾ ಅಪರಾಧಗಳ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಳ್ಳುವಂತೆ ದೇಶದ 400 ಮಿಲಿಯನ್ ಸ್ಮಾರ್ಟ್ ಪೋನ್ ಬಳಕೆದಾರರನ್ನು ಚುನಾವಣಾ ಆಯೋಗ ಕೋರಿದೆ.

Published: 14th April 2019 12:00 PM  |   Last Updated: 14th April 2019 01:47 AM   |  A+A-


Casual Photo

ಸಾಂದರ್ಭಿಕ ಚಿತ್ರ

Posted By : ABN ABN
Source : The New Indian Express
ನವದೆಹಲಿ: ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ ಚುನಾವಣೆಯ ಸಂದರ್ಭದಲ್ಲಿ ನಕಲಿ ಸುದ್ದಿಗಳು,ಚುನಾವಣಾ ಅಪರಾಧಗಳ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಳ್ಳುವಂತೆ ದೇಶದ 400 ಮಿಲಿಯನ್ ಸ್ಮಾರ್ಟ್ ಪೋನ್ ಬಳಕೆದಾರರನ್ನು  ಚುನಾವಣಾ ಆಯೋಗ ಕೋರಿದೆ.

ಹಣ ನೀಡಿಕೆ, ಮತದಾರರಿಗೆ ಬೆದರಿಕೆ ಹಾಗೂ ನಕಲಿ ಸುದ್ದಿಗಳು ಮುಂತಾದ ಚುನಾವಣಾ ಅಪರಾಧಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ  ದಾಖಲಿಸಲು ಮತ್ತು ವರದಿ ಮಾಡಲು ಜನರ ಸಹಾಯಕ್ಕಾಗಿ ಚುನಾವಣಾ ಆಯೋಗ ಸುಮಾರು  ಹನ್ನೇರಡು ಆಪ್ ಗಳನ್ನು  ಪರಿಚಯಿಸಿದೆ.

ಸಿ - ವಿಜಿಲ್ ಆಪ್ ನಲ್ಲಿ ಈಗಾಗಲೇ ಸುಮಾರು 70 ಸಾವಿರಕ್ಕೂ ಹೆಚ್ಚು ಚುನಾವಣಾ ಪ್ರಚಾರ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ.ಈ ಆಪ್ ಚುನಾವಣಾ ಆಯೋಗದ ವೆಬ್ ಸೈಟ್ ನಲ್ಲಿ ಲಭ್ಯವಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, ಮೂರನೇ ಎರಡು ಭಾಗದಷ್ಟು ಮಾನ್ಯವಾಗಿದ್ದು, ಎಷ್ಟು ನಕಲಿ ಸುದ್ದಿಗಳನ್ನು ಸ್ವೀಕರಿಸಲಾಗಿದೆ ಎಂಬುದರ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ.

ಚುನಾವಣಾ ಆಯೋಗದ 400 ಶಾಶ್ವತ  ಸಿಬ್ಬಂದಿ ಇಂತಹ ದೂರುಗಳ ಮೇಲ್ವಿಚಾರಣೆ ಮಾಡುತ್ತಿದ್ದು, 900 ಮಿಲಿಯನ್ ಗಿಂತಲೂ ಹೆಚ್ಚು ಮತದಾರರ ಬಗ್ಗೆ ಗಮನ ಹರಿಸುತ್ತಿದ್ದಾರೆ. ಅಲ್ಲದೇ ಚುನಾವಣಾ ಕಾರ್ಯಕ್ಕಾಗಿ ಶಿಕ್ಷಕರಿಂದ ಹಿಡಿದು ಪೊಲೀಸರವರೆಗೂ, ಅನೇಕ ಮಿಲಿಯನ್ ಸ್ಥಳೀಯ ನಿವಾಸಿಗಳ ನೆರವನ್ನು ಚುನಾವಣಾ ಆಯೋಗ ಪಡೆದುಕೊಂಡಿದೆ.
Stay up to date on all the latest ದೇಶ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp