ಪ್ರಧಾನಿ ಮೋದಿ ಅಣಕಿಸಿ ಲಾಲು ಪ್ರಸಾದ್ ಯಾದವ್ ಮಾಡಿರುವ ಡಬ್ ಸ್ಮಾಶ್ ವಿಡಿಯೋ ವೈರಲ್

ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ನೀಡಿದ್ದ ಅಚ್ಚೆ ದಿನ್ ಭರವಸೆ ಕುರಿತು ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಆರ್ ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಮಾಡಿರುವ ಹಳೆಯ ಡಬ್ ಸ್ಮಾಶ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಲಾಲು ಪ್ರಸಾದ್ ಯಾದವ್ , ಪ್ರಧಾನಿ ಮೋದಿ
ಲಾಲು ಪ್ರಸಾದ್ ಯಾದವ್ , ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ನೀಡಿದ್ದ ಅಚ್ಚೆ ದಿನ್  ಭರವಸೆ  ಕುರಿತು ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಆರ್ ಜೆಡಿ ಅಧ್ಯಕ್ಷ  ಲಾಲು ಪ್ರಸಾದ್ ಯಾದವ್ ಮಾಡಿರುವ ಹಳೆಯ ಡಬ್ ಸ್ಮಾಶ್  ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪ್ರತಿಯೊಬ್ಬರ ಅಕೌಂಟ್ ಗೆ  15 ಲಕ್ಷ ರೂ. ಹಾಕುವುದಾಗಿ ಪ್ರಧಾನಿ ಮೋದಿ ನೀಡಿದ್ದ ಭರವಸೆಯನ್ನೂ ಲೇವಡಿ ಮಾಡಿರುವ ಲಾಲು, ದೇಶದ ಜನ 15 ಲಕ್ಷ ರೂ. ಎಲ್ಲಿದೆ ಎಂದು ಕೇಳಿದ್ದಾರೆ ಎಂದು  ವಿಡಿಯೋ ಮಾಡಿದ್ದಾರೆ. ಅಚ್ಛೇದಿನ್ ಅಂದರೆ ಜುಮ್ಲಾ ಎಂದು ಲಾಲೂ ಪ್ರಸಾದ್ ಯಾದವ್ ಹೇಳಿದ್ದಾರೆ.

17 ಸೆಕೆಂಡ್ ಇರುವ ಈ ವಿಡಿಯೋವನ್ನು ಲಾಲು ಪ್ರಸಾದ್ ಯಾದವ್ ತಮ್ಮ ಟ್ವಿಟರ್ ನಲ್ಲಿ ಹಾಕಿದ್ದು, 1600ಕ್ಕೂ ಹೆಚ್ಚು ಕಾಮೆಂಟ್, 2700 ರೀ ಟ್ವೀಟ್,  ಸುಮಾರು 13 ಸಾವಿರ ಲೈಕ್ ಪಡೆದುಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಲಾಲು ಪ್ರಸಾದ್ ಯಾದವ್ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com