ಮುಸ್ಲಿಂ ಎಂಬ ಕಾರಣಕ್ಕಾಗಿ ತಮ್ಮ ತಂದೆಗೆ ಚುನಾವಣಾ ಆಯೋಗದಿಂದ ನಿರ್ಬಂಧ: ಆಜಂ ಖಾನ್ ಪುತ್ರ!

ನನ್ನ ತಂದೆ ಮುಸ್ಲಿಂ ಎಂಬ ಕಾರಣಕ್ಕಾಗಿ ಚುನಾವಣಾ ಆಯೋಗ ಅವರ ವಿರುದ್ಧ ಪ್ರಚಾರದಲ್ಲಿ ಭಾಗವಹಿಸದಂತೆ ನಿರ್ಬಂಧ ವಿಧಿಸಿದೆ ಎಂದು ಆಜಂ ಖಾನ್ ಪುತ್ರ, ಎಸ್ ಪಿ ನಾಯಕ ಅಬ್ದುಲ್ಲಾ ಆಜಂ ಖಾನ್ ಹೇಳಿದ್ದಾರೆ.
ಮುಸ್ಲಿಂ ಎಂಬ ಕಾರಣಕ್ಕಾಗಿ ತಮ್ಮ ತಂದೆಗೆ ಚುನಾವಣಾ ಆಯೋಗದಿಂದ ನಿರ್ಬಂಧ: ಆಜಂ ಖಾನ್ ಪುತ್ರ!
ಮುಸ್ಲಿಂ ಎಂಬ ಕಾರಣಕ್ಕಾಗಿ ತಮ್ಮ ತಂದೆಗೆ ಚುನಾವಣಾ ಆಯೋಗದಿಂದ ನಿರ್ಬಂಧ: ಆಜಂ ಖಾನ್ ಪುತ್ರ!
ನವದೆಹಲಿ: ನನ್ನ ತಂದೆ ಮುಸ್ಲಿಂ ಎಂಬ ಕಾರಣಕ್ಕಾಗಿ ಚುನಾವಣಾ ಆಯೋಗ ಅವರ ವಿರುದ್ಧ ಪ್ರಚಾರದಲ್ಲಿ ಭಾಗವಹಿಸದಂತೆ ನಿರ್ಬಂಧ ವಿಧಿಸಿದೆ ಎಂದು ಆಜಂ ಖಾನ್ ಪುತ್ರ, ಎಸ್ ಪಿ ನಾಯಕ ಅಬ್ದುಲ್ಲಾ ಆಜಂ ಖಾನ್ ಹೇಳಿದ್ದಾರೆ. 
ನಟಿ, ಬಿಜೆಪಿ ಅಭ್ಯರ್ಥಿ ಜಯಪ್ರಧಾ ವಿರುದ್ಧ ಅಸಭ್ಯ ರೀತಿಯ ಹೇಳಿಕೆ ನೀಡಿದ್ದ ಆಜಂ ಖಾನ್ ಗೆ  72 ಗಂಟೆಗಳ  ಕಾಲ ಪ್ರಚಾರ ನಡೆಸದಂತೆ ಚುನಾವಣಾ ಆಯೋಗ ಆದೇಶ ಹೊರಡಿಸಿತ್ತು. 
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಬ್ದುಲ್ಲಾ ಆಜಂ ಖಾನ್, ನನ್ನ ತಂದೆಗೆ ನಿರ್ಬಂಧ ವಿಧಿಸುವುದಕ್ಕೂ ಮುನ್ನ ಚುನಾವಣಾ ಆಯೋಗ ಸರಿಯಾದ ಪ್ರಕ್ರಿಯೆಗಳನ್ನು ಪಾಲಿಸಿಲ್ಲ ಎಂದು ಆರೋಪಿಸಿದ್ದಾರೆ. 
3 ದಿನಗಳ ಕಾಲ ಪ್ರಚಾರ ನಡೆಸದಂತೆ ನಿರ್ಬಂಧ ವಿಧಿಸುವುದಕ್ಕೂ ಮುನ್ನ ಕನಿಷ್ಟ ನೊಟೀಸ್ ನ್ನೂ ಜಾರಿಗೊಳಿಸಿಲ್ಲ. ನನ್ನ ತಂದೆ ಮುಸ್ಲಿಂ ಎಂಬ ಕಾರಣಕ್ಕೆ ಚುನಾವಣಾ ಆಯೋಗ ನಿರ್ಬಂಧ ವಿಧಿಸಿದೆ. ನಮ್ಮ ಮೇಲೆ ದಾಳಿ ನಡೆದಷ್ಟೂ ನಾವು ಹೆಚ್ಚು ಕೆಲಸ ಮಾಡುತ್ತೇವೆ ಎಂದು ಅಬ್ದುಲ್ಲಾ ಆಜಂ ಖಾನ್ ಹೇಳಿದ್ದಾರೆ.
ಜಯಪ್ರದ ಖಾಕಿ ಅಂಡರ್ ವೇರ್ ಧರಿಸುತ್ತಾರೆ ಎಂದು ಹೇಳುವ ಮೂಲಕ ಆಜಂ ಖಾನ್ ವಿವಾದ ಸೃಷ್ಟಿಸಿದ್ದರು.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com