ತಮಿಳುನಾಡು: ಡಿಎಂಕೆ ನಾಯಕಿ ಕನ್ನಿಮೋಳಿಯ ನಿವಾಸದ ಮೇಲೆ ಐಟಿ ದಾಳಿ

ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಸಹೋದರಿ ಹಾಗೂ ಸಂಸದೆ ಕನ್ನಿಮೋಳಿಯ ತೂತುಕುಡಿಯಲ್ಲಿರುವ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ಸಂಜೆ ದಾಳಿ ನಡೆಸಿದ್ದಾರೆ.
ಕನ್ನಿಮೋಳಿ
ಕನ್ನಿಮೋಳಿ

ಚೆನ್ನೈ: ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಸಹೋದರಿ ಹಾಗೂ ಸಂಸದೆ  ಕನ್ನಿಮೋಳಿಯ ತೂತುಕುಡಿಯಲ್ಲಿರುವ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ಸಂಜೆ ದಾಳಿ ನಡೆಸಿದ್ದಾರೆ.

ಚುನಾವಣಾ ಆಯೋಗದ ಫ್ಲೇಯಿಂಗ್ ಸ್ಕ್ವಾಡ್ ನೊಂದಿಗೆ 10 ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ ಎಂಬುದು ಮಾಧ್ಯಮಗಳು ವರದಿ ಮಾಡಿವೆ.

ಡಿಎಂಕೆ ಅಭ್ಯರ್ಥಿಯೊಬ್ಬರ ಮನೆಯಲ್ಲಿ ಅಪಾರ ಪ್ರಮಾಣದ ಹಣ ದೊರೆತ ನಂತರ ವೆಲ್ಲೂರು ಲೋಕಸಭಾ ಕ್ಷೇತ್ರದಲ್ಲಿ ಚುನಾಣೆಯನ್ನು ರದ್ದುಪಡಿಸಿದ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆ ಈ ದಾಳಿ ನಡೆಸಿದೆ.
ಡಿಎಂಕೆ ಅಭ್ಯರ್ಥಿಯೊಬ್ಬರ ಮನೆಯಲ್ಲಿ ತಮಿಳುನಾಡಿನಲ್ಲಿ 500 ಕೋಟಿ ಚಿನ್ನ ಹಾಗೂ 205 ಕೋಟಿ  ಮೊತ್ತದ ಚಿನ್ನವನ್ನ ವಶಪಡಿಸಿಕೊಂಡಿತ್ತು. ಹಣಕ್ಕಾಗಿ ನೋಟ ಆರೋಪದ ಮೇರೆಗೆ ಲೋಕಸಭಾ ಚುನಾವಣೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚುನಾವಣೆಯನ್ನು ರದ್ದುಪಡಿಸಲಾಗಿದೆ.
ಚುನಾವಣೆ ಹಿನ್ನೆಲೆಯಲ್ಲಿ ನಗದ ವರ್ಗಾವಣೆ ಸಂಬಂಧ ದೊರೆತ ಮಾಹಿತಿ ಪ್ರಕಾರ ಚೆನ್ನೈಯಲ್ಲಿನ ಫೈನಾನ್ಷಿಯರ್ ನಂತಹ ಕೆಲವರನ್ನು ಗುರಿಯಾಗಿರಿಸಿಕೊಂಡು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶುಕ್ರವಾರ ಶೋಧ ಕಾರ್ಯಾಚರಣೆ ನಡೆಸಿದ್ದರು.ಒಟ್ಟಾರೇ 11 ನಿವಾಸಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com