ಕಾಂಗ್ರೆಸ್ ಗೆ ಮತ ಹಾಕುವವರನ್ನು ಗಮನಿಸಲು ಮೋದಿ ಮತಗಟ್ಟೆಗಳಲ್ಲಿ ಸಿಸಿಟಿವಿ ಹಾಕಿಸಿದ್ದಾರೆ: ಬಿಜೆಪಿ ಶಾಸಕ

ಕಾಂಗ್ರೆಸ್ ಪಕ್ಷಕ್ಕೆ ಯಾರು ಮತ ಹಾಕುತ್ತಾರೆ ಎಂಬುದನ್ನು ಗಮನಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮತಗಟ್ಟೆಗಳಲ್ಲಿ ಸಿಸಿಟಿವಿ....

Published: 16th April 2019 12:00 PM  |   Last Updated: 16th April 2019 03:36 AM   |  A+A-


PM Modi installed CCTV cameras at polling booth to see who voted for Congress: BJP leader Ramesh Qatar

ರಮೇಶ್ ಖತಾರ್

Posted By : LSB LSB
Source : ANI
ದಾಹೊದ್(ಗುಜರಾತ್): ಕಾಂಗ್ರೆಸ್ ಪಕ್ಷಕ್ಕೆ ಯಾರು ಮತ ಹಾಕುತ್ತಾರೆ ಎಂಬುದನ್ನು ಗಮನಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮತಗಟ್ಟೆಗಳಲ್ಲಿ ಸಿಸಿಟಿವಿ ಹಾಕಿಸಿದ್ದಾರೆ ಎಂದು ಗುಜರಾತ್ ಬಿಜೆಪಿ ಶಾಸಕ ರಮೇಶ್ ಖತಾರ್ ಅವರು ಮತದಾರರಿಗೆ ಬೆದರಿಕೆ ಹಾಕಿದ್ದಾರೆ.

ದಾಹೊದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಸ್ವಂತ್ ಸಿನ್ಹಾ ಸುಮನ್ ಭಾಯಿ ಭಾಭೋರ್ ಅವರ ಪರ ಪ್ರಚಾರ ನಡೆಸಿದ ರಮೇಶ್ ಖತಾರ್ ಅವರು, ಪ್ರಧಾನಿ ಮೋದಿ ಮತಗಟ್ಟೆಗಳಲ್ಲಿ ಸಿಸಿಟಿವಿ ಹಾಕಿಸಿದ್ದು, ಕಾಂಗ್ರೆಸ್ ಯಾರೂ ಮತ ಹಾಕುತ್ತಾರೆ ಮತ್ತು ಬಿಜೆಪಿ ಯಾರೂ ಹಾಕುತ್ತಾರೆ ಎಂಬುದನ್ನು ಗಮನಿಸುತ್ತಾರೆ ಎಂದರು.

ಪ್ರಧಾನಿ ಮೋದಿಗೆ ಯಾರು ಮತ ಹಾಕುವುದಿಲ್ಲವೊ ಅವರಿಗೆ ಕೆಲಸ ಸಿಗದಂತೆ ಮಾಡಲಾಗುವುದು ಎಂದು ಬಿಜೆಪಿ ಶಾಸಕ ಬೆದರಿಕೆ ಹಾಕಿದ್ದಾರೆ.

ಗುಜರಾತ್ ನಲ್ಲಿ ಏಪ್ರಿಲ್ 23ರಂದು ಮೂರನೇ ಹಂತದ ಲೋಕಸಭೆ ಚುನಾವಣೆ ನಡೆಯುತ್ತಿದ್ದು, ಮೇ 23ರಂದು ಫಲಿತಾಂಶ ಪ್ರಕಟವಾಗಲಿದೆ.
Stay up to date on all the latest ದೇಶ news with The Kannadaprabha App. Download now
facebook twitter whatsapp