ಲೋಕಸಭಾ ಚುನಾವಣೆ: 2ನೇ ಹಂತದಲ್ಲಿ ಕರ್ನಾಟಕ ಸೇರಿದಂತೆ 11 ರಾಜ್ಯಗಳು, 1 ಕೇಂದ್ರಾಡಳಿತ ಪ್ರದೇಶದಲ್ಲಿ ಮತದಾನ

ಕರ್ನಾಟಕ ಸೇರಿದಂತೆ 11 ರಾಜ್ಯಗಳು, ಒಂದು ಕೇಂದ್ರಾಡಳಿತ ಪ್ರದೇಶದಲ್ಲಿನ 95 ಲೋಕಸಭಾ ಕ್ಷೇತ್ರಗಳಲ್ಲಿ ಗುರುವಾರ ಮತದಾನ ನಡೆಯಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕರ್ನಾಟಕ ಸೇರಿದಂತೆ 11 ರಾಜ್ಯಗಳು, ಒಂದು ಕೇಂದ್ರಾಡಳಿತ ಪ್ರದೇಶದಲ್ಲಿನ 95 ಲೋಕಸಭಾ ಕ್ಷೇತ್ರಗಳಲ್ಲಿ ಗುರುವಾರ ಮತದಾನ ನಡೆಯಲಿದೆ.

ಅಸ್ಸಾಂ, ಬಿಹಾರದಲ್ಲಿ ತಲಾ 5, ಛತ್ತೀಸ್ ಗಢ 3,  ಜಮ್ಮು- ಕಾಶ್ಮೀರ 2, ಕರ್ನಾಟಕ 14, ಮಹಾರಾಷ್ಟ್ರ 10, ಮಣಿಪುರ 1, ಒಡಿಶಾ ಐದು, ತಮಿಳುನಾಡು 38, ಉತ್ತರ ಪ್ರದೇಶ 8, ಪಶ್ಚಿಮ ಬಂಗಾಳ 3 ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿಯ 1 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ತಮಿಳುನಾಡಿನ ವೆಲ್ಲೂರು ಲೋಕಸಭಾ ಕ್ಷೇತ್ರದಲ್ಲಿ ಹಣ, ಮದ್ಯದ ಹೊಳೆಯಿಂದಾಗಿ ಚುನಾವಣೆಯನ್ನು ಚುನಾವಣಾ ಆಯೋಗದ ಶಿಫಾರಸ್ಸಿನ ಮೇರೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮುಂದೂಡಿದ್ದಾರೆ. ವೆಲ್ಲೂರಿನಲ್ಲೂ ಗುರುವಾರವೇ ಚುನಾವಣೆ ನಿಗದಿಯಾಗಿತ್ತು.

ಈ ಹಂತದಲ್ಲಿ ಕರ್ನಾಟಕದಲ್ಲಿ   2 ಕೋಟಿ 63 ಲಕ್ಷದ 38 ಸಾವಿರದ 227 ಮತದಾರರ ಮತ ಚಲಾಯಿಸಲಿದ್ದು, ಒಟ್ಟು 30 ಸಾವಿರದ 410 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 241 ಅಭ್ಯರ್ಥಿಗಳಲ್ಲಿ 17 ಮಂದಿ ಮಹಿಳೆಯರಿದ್ದು, ಇವರ ರಾಜಕೀಯ ಹಣೆಬರಹವನ್ನು ಮತದಾರರು  ನಿರ್ಧರಿಸಲಿದ್ದಾರೆ.

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರಿಗೆ ಬಿಜೆಪಿಯ ಜಿ.ಎಸ್. ಬಸವರಾಜು ಪ್ರಬಲ ಎದುರಾಳಿಯಾಗಿದ್ದರೆ ಮಂಡ್ಯದಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿಗೆ  ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪ್ರಬಲ ಎದುರಾಳಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com