ಮಧ್ಯ ಪ್ರದೇಶ ಕಾಂಗ್ರೆಸ್‌ನ 'ಚೌಕೀದಾರ್ ಚೋರ್‌ ಹೈ' ಜಾಹೀರಾತು ನಿಷೇಧ

ಮಧ್ಯ ಪ್ರದೇಶ ಕಾಂಗ್ರೆಸ್‌ ಸಮಿತಿ 'ಚೌಕೀದಾರ್ ಚೋರ್‌ ಹೈ' ಜಾಹೀರಾತಿಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ 'ಚೌಕೀದಾರ್ ಚೋರ್‌ ಹೈ'....
ನರೇಂದ್ರ ಮೋದಿ
ನರೇಂದ್ರ ಮೋದಿ
ಭೋಪಾಲ್‌: ಮಧ್ಯ ಪ್ರದೇಶ ಕಾಂಗ್ರೆಸ್‌ ಸಮಿತಿ 'ಚೌಕೀದಾರ್ ಚೋರ್‌ ಹೈ' ಜಾಹೀರಾತಿಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ 'ಚೌಕೀದಾರ್ ಚೋರ್‌ ಹೈ' ಜಾಹೀರಾತು ಪ್ರಸಾರವನ್ನು ನಿಷೇಧಿಸಿದೆ.
ಕಾಂಗ್ರೆಸ್ ನ ಆಡಿಯೋ ಹಾಗೂ ವೀಡಿಯೋ ಕ್ಯಾಂಪೇನ್‌ನಲ್ಲಿ 'ಚೌಕೀದಾರ್ ಚೋರ್‌ ಹೈ' ಎಂಬ ಪದ ಪ್ರಯೋಗ ಮಾಡಲಾಗಿತ್ತು. ಈ ಬಗ್ಗೆ ಬಿಜೆಪಿ ಆಕ್ಷೇಪಣೆ ಸಲ್ಲಿಸಿದ ಹಿನ್ನೆಲೆ ಚುನಾವಣಾ ಆಯೋಗ ಈ ಕ್ರಮ ಕೈಗೊಂಡಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್, ''ಈ ಕ್ಯಾಂಪೇನ್‌ನಲ್ಲಿ ನಾವು ಯಾರ ಹೆಸರನ್ನೂ ಬಳಸಿಕೊಂಡಿಲ್ಲ. ಹೀಗಾಗಿ ಚುನಾವಣಾ ಆಯೋಗ ತನ್ನ ನಿರ್ಧಾರವನ್ನು ಮರುಪರಿಶೀಲನೆ ಮಾಡುವಂತೆ ನಾವು ಮನವಿ ಮಾಡುತ್ತೇವೆ'' ಎಂದು ಹೇಳಿದೆ.
ಜಂಟಿ ಮುಖ್ಯ ಚುನಾವಣಾಧಿಕಾರಿ ರಾಜೇಶ್‌ ಕೌಲ್‌ ಆದೇಶದ ಮೇರೆಗೆ  'ಚೌಕೀದಾರ್ ಚೋರ್‌ ಹೈ' ಜಾಹೀರಾತನ್ನು ಬ್ಯಾನ್‌ ಮಾಡಲಾಗುತ್ತಿದೆ'' ಎಂದು ಚುನಾವಣಾ ಆಯೋಗದ ವಕ್ತಾರರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com