ನಾನು ಶಾಪ ಹಾಕಿದ್ದೆ, ಹೇಮಂತ್ ಕರ್ಕರೆ ಸತ್ತಿದ್ದು ಅವನ 'ಕರ್ಮ'ದಿಂದಾಗಿ: ಸಾಧ್ವಿ ಪ್ರಜ್ಞಾ

26/11 ಮುಂಬಯಿ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಉಗ್ರ ನಿಗ್ರಹ ದಳ ಅಧಿಕಾರಿ ಹೇಮಂತ್ ಕರ್ಕರೆ ವಿರುದ್ಧ 2008ರ ಮಾಲೇಂಗಾವ್ ಸ್ಪೋಟದ ಆರೋಪಿ ...
ಸಾದ್ವಿ ಪ್ರಜ್ಞಾ
ಸಾದ್ವಿ ಪ್ರಜ್ಞಾ
ಭೂಪಾಲ್: 26/11 ಮುಂಬಯಿ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಉಗ್ರ ನಿಗ್ರಹ ದಳ ಅಧಿಕಾರಿ ಹೇಮಂತ್ ಕರ್ಕರೆ ವಿರುದ್ಧ 2008ರ ಮಾಲೇಂಗಾವ್ ಸ್ಪೋಟದ ಆರೋಪಿ ಸಾಧ್ವಿ ಪ್ರಜ್ಞಾ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ನನ್ನ ಶಾಪ ಹಾಗೂ ಅವರ ಕರ್ಮದಿಂದಾಗಿ ಹೇಮಂತ್ ಕರ್ಕರೆ ಸತ್ತಿದ್ದಾರೆ ಎಂದು ಸಾದ್ವಿ ಹೇಳಿದ್ದಾರೆ. ಹೇಮಂತ್ ಕರ್ಕರೆ ತನಿಖಾಧಿಕಾರಿಯಾಗಿದ್ದಾಗ ಹಿಂದೂ ಸಂಘಟನೆಯ ಹಲವು ಸದಸ್ಯರನ್ನು ಬಂಧಿಸಿದ್ದರು. ನನ್ನನ್ನು ಬಂಧಿಸಿದ್ದಾಗ ನನಗೆ ಕಿರುಕುಳ ನೀಡಿದ್ದರು, 
ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿರಲಿಲ್ಲ, ಹೀಗಾಗಿ ನನ್ನನ್ನು ಹೋಗಲು ಬಿಡುವಂತೆ ಕೇಳಿದ್ದೆ, ಆದರೆ ಅದನ್ನು ನಿರಾಕರಿಸಿದ್ದ ಅವರು, ನನ್ನ ವಿರುದ್ಧ ಸಾಕ್ಷಿ ತರುವುದಾಗಿ ಹೇಳಿ ನನ್ನನ್ನು ಬಿಟ್ಟಿರಲಿಲ್ಲ, ನಾನು ಆ  ವೇಳೆ ಅವರಿಗೆ ಶಾಪ ಹಾಕಿದ್ದೆ, ಹೀಗಾಗಿ ನವೆಂಬರ್ 2008 ರಂದು ನಡೆದ ಮುಂಬಯಿ ದಾಳಿಯಲ್ಲಿ ಹೇಮಂತ್ ಕರ್ಕರೆ ಉಗ್ರರ ಜೊತೆ ಹೋರಾಡಿ ಹುತಾತ್ಮರಾಗಿದ್ದರು. 
ಸಾದ್ವಿ ಪ್ರಜ್ಞಾ ಸಿಂಗ್  ಭೂಪಾಲ್ ನಿಂದ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ವಿರುದ್ಧ ಕಣಕ್ಕಿಳಿದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com