ಲೋಕ ಸಮರ: 2ನೇ ಹಂತದ ಮತದಾನ, ಜಮ್ಮು–ಕಾಶ್ಮೀರದ 90 ಮತಗಟ್ಟೆಗಳಲ್ಲಿ ಶೂನ್ಯ ಮತದಾನ

ಲೋಕಸಭಾ ಚುನಾವಣೆ ನಿಮಿತ್ತ ನಿನ್ನೆ ನಡೆದ 2ನೇ ಹಂತದ ಮತದಾನದ ವೇಳೆ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಸುಮಾರು 90 ಮತಗಟ್ಟೆಗಳಲ್ಲಿ ಶೂನ್ಯ ಮತದಾನ ದಾಖಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಶ್ರೀನಗರ: ಲೋಕಸಭಾ ಚುನಾವಣೆ ನಿಮಿತ್ತ ನಿನ್ನೆ ನಡೆದ 2ನೇ ಹಂತದ ಮತದಾನದ ವೇಳೆ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಸುಮಾರು 90 ಮತಗಟ್ಟೆಗಳಲ್ಲಿ ಶೂನ್ಯ ಮತದಾನ ದಾಖಲಾಗಿದೆ.
ಗುರುವಾರ ನಡೆದ ಎರಡನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಸುಮಾರು 90ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಶೂನ್ಯ ಮತದಾನ ನಡೆದಿದೆ. ಎಂಟು ವಿಧಾನಸಭೆ ಕ್ಷೇತ್ರಗಳನ್ನು ಹೊಂದಿರುವ ಶ್ರೀನಗರ ಕ್ಷೇತ್ರದ 50 ಮತಗಟ್ಟೆ ಕೇಂದ್ರಗಳು ತೆರೆದಿದ್ದರೂ ಜನರು ಮತ ಹಾಕಲು ಬಾರದೆ ಶೂನ್ಯ ಮತದಾನ ದಾಖಲಾಗಿದೆ.  ಈದ್ಗಾ, ಖನ್ಯಾರ್‌, ಹಬ್ಬಾ ಕದಲ್‌ ಸೇರಿದಂತೆ ಹಲವೆಡೆ ಮತದಾನಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಲಾಗಿದೆ.
ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್‌ ಅಬ್ದುಲ್ಲಾ ಮತ್ತು ಒಮರ್ ಮತ ಚಲಾಯಿಸಿದರು. ಸೋನವಾರ ವಿಧಾನಸಭಾ ಕ್ಷೇತ್ರವನ್ನು ಹೊರತುಪಡಿಸಿದರೆ, ಏಳು ವಿಧಾನಸಭೆ ಕ್ಷೇತ್ರಗಳಲ್ಲಿ ಮತದಾನದ ಶೇಕಡಾವಾರು ಪ್ರಮಾಣ ಒಂದಂಕಿ ದಾಟಿರಲಿಲ್ಲ. ಮತದಾನದ ಅಂತ್ಯದ ವೇಳೆಗೆ ಈದ್ಗಾದಲ್ಲಿ ಶೇ.3.3 ರಷ್ಟು ಮತದಾನವಾಗಿದೆ. ಉಳಿದಂತೆ ಸೋನಾವರ್ ನಲ್ಲಿ ಶೇ. 12 ರಷ್ಟು ಮತದಾನ ದಾಖಲಾಗಿದೆ.
ಅಷ್ಟೇ ಅಲ್ಲ ಜಮ್ಮು–ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲೂ ಅತಿಕಡಿಮೆ ಮತದಾನವಾಗಿದ್ದು,  2014ರ ಚುನಾವಣೆಯಲ್ಲಿ ಶೇ 25.86ರಷ್ಟು ಇದ್ದ ಮತದಾನ ಈ ಬಾರಿ ಶೇ 12.43ಕ್ಕೆ ಕುಸಿದಿದೆ. ಪ್ರತ್ಯೇಕವಾದಿಗಳು ಮತದಾನ ಬಹಿಷ್ಕಾರಕ್ಕೆ ಕರೆ ನೀಡಿದ್ದರೂ ಅಹಿತಕರ ಘಟನೆಗಳು ನಡೆದಿಲ್ಲ. ಆದರೂ ಇಲ್ಲಿ ಮತದಾನಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಉಧಂಪುರ ಕ್ಷೇತ್ರದಲ್ಲಿ ಶೇ 58ಕ್ಕಿಂತ ಹೆಚ್ಚು ಮತ ದಾಖಲಾಗಿವೆ. ಶ್ರೀನಗರ ಸಂಸದೀಯ ಕ್ಷೇತ್ರದ ಭಾಗವಾಗಿರುವ ಗಂಡರ್ ಬಾಲ್‌ ಜಿಲ್ಲೆಯ 27 ಮತಗಟ್ಟೆಗಳಲ್ಲಿ ದಿನ ಅಂತ್ಯಕ್ಕೆ ಮತದಾನ ದಾಖಲಾಗಲಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com